Afghanistan : ಅಂತ್ಯಕ್ರಿಯೆಯಲ್ಲಿ ಸೂಸೈಡ್ ಬಾಂಬ್ ದಾಳಿ : 18 ಜನರ ದುರ್ಮರಣ

ಅಫಘಾನಿಸ್ತಾನದಲ್ಲಿ ರವಿವಾರ ಉಗ್ರನೊಬ್ಬ ನಡೆಸಿದ ಸೂಸೈಡ್ ಬಾಂಬ್ ದಾಳಿಯಲ್ಲಿ 18 ಜನರು ಸಾವಿಗೀಡಾಗಿದ್ದು, 14 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೂರ್ವ ಅಫಘಾನಿಸ್ತಾನದ ನಂಗರ್ಹಾರ್ ನ ಬೆಹಸೂದ್ ಜಿಲ್ಲೆಯಲ್ಲಿ ಅಂತ್ಯಕ್ರಿಯೆ ನಡೆಯುತ್ತಿದ್ದ ವೇಳೆಯಲ್ಲಿ ಉಗ್ರ ಬಾಂಬ್ ಸ್ಫೋಟಿಸಿಕೊಂಡಿದ್ದಾನೆ.

ಅಫಘಾನಿಸ್ತಾನದ ಹಸ್ಕಾ ಮೀನಾ ಜಿಲ್ಲೆಯ ಮಾಜಿ ಗವರ್ನರ್ ಅಂತ್ಯಕ್ರಿಯೆಗೆ ನಾಗರಿಕರು ಸೇರಿದ್ದ ವೇಳೆ ಬಾಂಬ್ ದಾಳಿ ನಡೆಸಲಾಗಿದೆ. ದಾಳಿಯ ಹೊಣೆಯನ್ನು ಇದುವರೆಗೆ ಯಾವ ಉಗ್ರ ಸಂಘಟನೆಗಳು ಹೊತ್ತುಕೊಂಡಿಲ್ಲ.

 

Leave a Reply

Your email address will not be published.

Social Media Auto Publish Powered By : XYZScripts.com