14 ವರ್ಷಗಳ ಬಳಿಕ ವಿಶ್ವನಾಥನ್ ಆನಂದ್ ಮುಡಿಗೆ World Rapid Chess ಕಿರೀಟ

ಭಾರತದ ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ 14 ವರ್ಷಗಳ ಬಳಿಕ ವಿಶ್ವ ರ‍್ಯಾಪಿಡ್ ಪ್ರಶಸ್ತಿ ಜಯಿಸಿದ್ದಾರೆ. ಇದಕ್ಕೂ ಮುಂಚೆ 2003 ರಲ್ಲಿ ಆನಂದ್, ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್ಷಿಪ್ ಜಯಿಸಿದ್ದರು.

ಶುಕ್ರವಾರ ಸೌದಿಅರೇಬಿಯಾದ ರಿಯಾದ್ ನಲ್ಲಿ ಟೈ ಬ್ರೇಕರ್ ನಲ್ಲಿ ರಷ್ಯಾದ ವ್ಲಾದಿಮಿರ್ ಫೆಡೋಸಿವ್ ಅವರನ್ನು 2-0 ಯಿಂದ ಮಣಿಸಿದ ವಿಶ್ವನಾಥನ್ ಆನಂದ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಬುಧವಾರ ನಡೆದ 9ನೇ ಸುತ್ತಿನ ಹಣಾಹಣಿಯಲ್ಲಿ ರಷ್ಯಾದ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಗೆಲುವು ಸಾಧಿಸಿದ್ದರು.

Image result for viswanathan anand rapid riyadh

ಟೂರ್ನಿಯುದ್ದಕ್ಕೂ ಅಜೇಯರಾಗಿಯೇ ಉಳಿದ ಆನಂದ್, 14ನೇ ಸುತ್ತಿನಲ್ಲಿ ರಷ್ಯಾದ ಅಲೆಕ್ಸಾಂಡರ್ ಗ್ರಿಸ್ ಚುಕ್ ಹಾಗೂ 15ನೇ ಸುತ್ತಿನಲ್ಲಿ ಚೀನಾ ದೇಶದ ಬು ಕ್ಸಿಯಾಂಗ್ ಜಿ ಅವರನ್ನು ಪರಾಭವಗೊಳಿಸಿದ್ದರು.

 

Leave a Reply

Your email address will not be published.