Uttar Pradesh : ಭಗವದ್ಗೀತಾ ಪಠಣ ಸ್ಪರ್ಧೆ : 2ನೇ ಬಹುಮಾನ ಪಡೆದ ಮುಸ್ಲಿಂ ಬಾಲಕಿ

ಉತ್ತರ ಪ್ರದೇಶದ ಮೀರಟ್ ನಲ್ಲಿ ಆಯೋಜಿಸಲಾಗಿದ್ದ ಗೀತಾ ಪಠಣ ಸ್ಪರ್ಧೆಯಲ್ಲಿ ಮುಸ್ಲಿಂ ಬಾಲಕಿಯೊಬ್ಬಳು ದ್ವಿತೀಯ ಬಹುಮಾನ ಪಡೆದಿದ್ದಾಳೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಕಾರದಿಂದ ಆಯೋಜಿಸಲಾಗಿದ್ದ ಭಗವದ್ಗೀತೆ ಶ್ಲೋಕ ಪಠಣ ಸ್ಪರ್ಧೆಯಲ್ಲಿ ಮೀರಟ್ ನಗರದ 15 ವರ್ಷದ ಬಾಲಕಿ ಆಲಿಯಾ ಖಾನ್ 2ನೇ ಬಹುಮಾನ ಪಡೆದುಕೊಂಡಿದ್ದಾಳೆ.

Image result for alia khan geeta meerut recitation

ಅನ್ಯ ಧರ್ಮದ ಗ್ರಂಥಗಳನ್ನು ಅಧ್ಯಯನ ಮಾಡಲು ನಮ್ಮ ಮನೆಯಲ್ಲಿ ಯಾರೂ ವಿರೋಧ ವ್ಯಕ್ತಪಡಿಸಲಿಲ್ಲ ಎಂದಿರುವ ಆಲಿಯಾ ಖಾನ್ ‘ ಯಾರಾದರೂ ಅಕ್ಷೇಪ ವ್ಯಕ್ತಪಡಿಸಿದರೆ ನಾನು ನೇರವಾಗಿ ಹೇಳುತ್ತೇನೆ. ನಾನು ಭಗವದ್ಗೀತೆಯನ್ನು ಧರ್ಮದ ಕಾರಣಕ್ಕಾಗಿ ಓದುವುದಿಲ್ಲ. ಜ್ಞಾನ ಸಂಪಾದಿಸಲು ಓದುತ್ತೇನೆ. ಜ್ಞಾನವನ್ನು ನಾವು ಎಲ್ಲಿಂದಲಾದರೂ ಪಡೆದುಕೊಳ್ಳಬಹುದು ‘ ಎಂದು ಹೇಳಿದ್ದಾಳೆ.

Image result for alia khan geeta meerut recitation

ಮುಸ್ಲಿಂ ಬಾಲಕಿಯೊಬ್ಬಳು ಗೀತಾ ಪಠಣ ಸ್ಪರ್ಧೆಯಲ್ಲಿ ಬಹುಮಾನ ಪಡೆಯುತ್ತಿರುವುದು ಇದೇ ಮೊದಲಲ್ಲ. ಕೆಲ ದಿನಗಳ ಹಿಂದೆ ಲಖ್ನೋದ 16 ವರ್ಷದ ಬಾಲಕಿ ಅಫ್ರೀನ್ ರೌಫ್ ಪ್ರಥಮ ಬಹುಮಾನ ಪಡೆದಿದ್ದಳು.

Leave a Reply

Your email address will not be published.

Social Media Auto Publish Powered By : XYZScripts.com