ಆಡಿ ಕಾರ್‌ ಖರೀದಿಸಿದ ‘ಚಮಕ್‌’ ಬೆಡಗಿ : ಭಾವಿ ಪತಿ ಜೊತೆ Jolly Ride

ಸ್ಯಾಂಡಲ್‌ವುಡ್‌ಗೆ ಕಿರಿಕ್‌ ಪಾರ್ಟಿ ಮೂಲಕ ಎಂಟ್ರಿ ಕೊಟ್ಟು ಈಗ ಚಮಕ್‌ ಮೂಲಕ ಸದ್ದು ಮಾಡುತ್ತಿರೋ ನಟಿ ರಶ್ಮಿಕಾ ಮಂದಣ್ಣ ಹೊಸ ವರ್ಷದ ಹೊಸ್ತಿಲಲ್ಲಿ ಆಡಿ ಕಾರ್‌ನ ಒಡತಿಯಾಗಿದ್ದಾರೆ. ಕಾರು ಖರೀದಿ ವೇಳೆ ಭಾವಿ ಪತಿ ರಕ್ಷಿತ್‌ ಶೆಟ್ಟಿ ಸಹ ಭಾಗಿಯಾಗಿದ್ದು ಅವರ ಖುಷಿಯನ್ನು ಇಮ್ಮಡಿಗೊಳಿಸಿದೆ.

ರಶ್ಮಿಕಾ ಆವರಿಗೆ ಡಿಸೆಂಬರ್‌ ಲಕ್ಕಿ ತಿಂಗಳು ಎಂದರೆ ತಪ್ಪಿಲ್ಲ. ರಶ್ಮಿಕಾ ನಟನೆಯ ಅಂಜನೀಪುತ್ರ ಹಾಗೂ ಚಮಕ್‌ ಎರಡೂ ಸಿನಿಮಾಗಳು ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿವೆ. ಎರಡೂ ಸಿನಿಮಾದಲ್ಲೂ ರಶ್ಮಿಕಾ ಅಭಿನಯ ನೋಡಿ ಪ್ರೇಕ್ಷಕರು ಫುಲ್‌ ಫಿದಾ ಆಗಿದ್ದಾರೆ.

ಈ ಸಂಭ್ರಮದ ಮಧ್ಯೆ ರಶ್ಮಿಕಾ ಕೆಂಪು ಆಡಿ ಕಾರು ಖರೀದಿಸಿರುವುದು ಅವರ ಸಂತೋಷ ಮತ್ತಷ್ಟು ಹೆಚ್ಚುವಂತೆ ಮಾಡಿದೆ.

Leave a Reply

Your email address will not be published.

Social Media Auto Publish Powered By : XYZScripts.com