WATCH : ರಜನೀಶ್ ಗುರ್ಬಾನಿ Hat-Trick : ರಣಜಿ ಫೈನಲ್ ನಲ್ಲಿ ವಿದರ್ಭ ಬೌಲರ್ ಸಾಧನೆ

ಇಂದೋರಿನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡದ ರಜನೀಶ್ ಗುರ್ಬಾನಿ, ದೆಹಲಿ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಶನಿವಾರ ಎರಡನೇ ದಿನದಾಟದಲ್ಲಿ, ರಜನೀಶ್ ಗುರ್ಬಾನಿ ದೆಹಲಿಯ ಮೂರು ಬ್ಯಾಟ್ಸಮನ್ ಗಳನ್ನು ಬೋಲ್ಡ್ ಮಾಡಿದ್ದಾರೆ.

ದೆಹಲಿ ಬ್ಯಾಟ್ಸಮನ್ ಗಳಾದ ವಿಕಾಸ್ ಮಿಶ್ರಾ, ನವದೀಪ್ ಸೈನಿ ಹಾಗೂ ಧ್ರುವ್ ಶೋರೆ ಅವರನ್ನು ಬೋಲ್ಡ್ ಮಾಡುವ ಮೂಲಕ ರಜನೀಶ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ರಣಜಿ ಟ್ರೋಫಿ ಫೈನಲ್ ನಲ್ಲಿ ಹ್ಯಾಟ್ರಿಕ್ ಪಡೆದ ಎರಡನೇ ಬೌಲರ್ ಎಂಬ ಖ್ಯಾತಿಗೆ ಗುರ್ಬಾನಿ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ತಮಿಳುನಾಡಿನ ಬಿ.ಕಲ್ಯಾಣಸುಂದರಂ 1972/73 ರ ಫೈನಲ್ ನಲ್ಲಿ ಮುಂಬೈ ವಿರುದ್ಧ ಹ್ಯಾಟ್ರಿಕ್ ಸಾಧನೆ ಮಾಡಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com