ನನಗೆ ಮಕ್ಕಳನ್ನು ಹೆರುವಷ್ಟು ಸಮಯವಿಲ್ಲ ಎಂದ ವಿದ್ಯಾಬಾಲನ್‌……ಹೀಗಂದಿದ್ಯಾಕೆ ?

ಮುಂಬೈ : ತುಮ್ಹಾರಿ ಸುಲು ಸಿನಿಮಾದ ಮೂಲಕ ಸದ್ಯ ಸುದ್ದಿಯಲ್ಲಿರುವ ಬಾಲಿವುಡ್‌ ನಟಿ ವಿದ್ಯಾ ಬಾಲನ್‌ ಈ ಬಾರಿ ಮತ್ತೆ ಸುದ್ದಿಯಾಗಿದ್ದಾರೆ. ನನಗೆ ಈಗ ಮಕ್ಕಳನ್ನು ಹೆರುವಷ್ಟು ಸಮಯವಿಲ್ಲ. ನನಗೆ ನನ್ನ ಸಿನಿಮಾಗಳೇ ಮಕ್ಕಳಿದ್ದಂತೆ ಎಂದಿದ್ದಾರೆ.

ಸದಾ ಸಿನಿಮಾಗಳಲ್ಲಿ ಬ್ಯುಸಿಯಾಗಿರು  ವಿದ್ಯಾಬಾಲನ್‌ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು. ಮೊದಲಿನಿಂದಲೂ ಸಿನಿಮಾಗಳಲ್ಲಿ ಬ್ಯುಸಿಯಾಗಿರು  ವಿದ್ಯಾ, ಕಾರ್ಯಕ್ರಮವೊಂದರಲ್ಲಿ ಮಕ್ಕಳ ಬಗ್ಗೆ ಈ ರೀತಿ ಹೇಳಿಕೆ ನೀಡಿದ್ದಾರೆ.

ಮದುವೆಯಾಗಿದೆ ಎಂದ ಮಾತ್ರಕ್ಕೆ ನನಗೆ ಮಕ್ಕಳಾಗಬೇಕು ಎಂದೇನಿಲ್ಲ. ಅಲ್ಲದೆ ಅದಕ್ಕೆ ನನಗೆ ಸಮಯವೂ ಇಲ್ಲ ಎಂದಿದ್ದಾರೆ. ಜನವರಿ 1ರಂದು 40ನೇ ವರ್ಷಕ್ಕೆ ಕಾಲಿಡುತ್ತಿರುವ ವಿದ್ಯಾಬಾಲನ್‌ ಅವರಿಗೆ ಮಕ್ಕಳ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಈ ರೀತಿ ಉತ್ತರಿಸಿದ್ದಾರೆ.

1012ರಲ್ಲಿ ವಿದ್ಯಾ ಬಾಲನ್‌ ನಿರ್ಮಾಪಕ ಸಿದ್ಧಾರ್ಥ್‌ ರಾಯ್‌ಕಪೂರ್‌ ಅವರನ್ನು ವಿವಾಹವಾಗಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com