ಜೀವನ ನಿರ್ವಹಣೆಗೆ ಕಾರು ಚಾಲಕರಾದ ಚಾಮಯ್ಯ ಮೇಷ್ಟ್ರ ಪುತ್ರ ಶಂಕರ್‌ ಅಶ್ವಥ್‌ !

ಬೆಂಗಳೂರು : ಸಿನಿಮಾ ರಂಗದಲ್ಲಿ ಚಾಮಯ್ಯ ಮೇಷ್ಟ್ರು ಎಂದೇ ಖ್ಯಾತರಾಗಿದ್ದ ನಟ ಕೆ.ಎಸ್‌ ಅಶ್ವಥ್‌ ಅವರ ಪುತ್ರ ಶಂಕರ್‌ ಅಶ್ವಥ್‌ ಈಗ ಜೀವನ ನಿರ್ವಹಣೆಗಾಗಿ ಕ್ಯಾಬ್‌ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.

ಹೌದು ಎರಡೂವರೆ ದಶಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದ ಶಂಕರ್ ಅಶ್ವಥ್‌ ಅವರಿಗೆ ಸೂಕ್ತ ಅವಕಾಶ ಸಿಗುತ್ತಿಲ್ಲ. ಆದ ಕಾರಣ ಜೀವನ ನಿರ್ವಹಣೆ ಕಷ್ಟವಾಗಿ ಉಬರ್‌ ಕಾರು ಚಾಲನೆ ಮಾಡಿ ಸಂಪಾದನೆ ಮಾಡುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಂಕರ್‌ ಅಶ್ವಥ್‌, ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಮಾಡುವ ಯಾವುದೇ ಕೆಲಸವಾದರೂ ಅದನ್ನು ಕೀಳಾಗಿ ಕಾಣಬಾರದು. ಧಾರಾವಾಹಿ, ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡುತ್ತೇನೆ. ಆದರೆ ನನ್ನ ಜೀವನ ನಿರ್ವಹಣೆಗೆ ಆ ಹಣ ಸಾಲುತ್ತಿಲ್ಲ. ಆದ್ದರಿಂದ ನನ್ನ ಕಾರನ್ನು ಉಬರ್‌ಗೆ ಅಟ್ಯಾಚ್‌ ಮಾಡಿಸಿದೆ. ಈಗ ಕಾರು ಓಡಿಸಿಕೊಂಡು ಜೀವನ ಸಾಗಿಸುತ್ತಾ ನೆಮ್ಮದಿಯಾಗಿದ್ದೇನೆ ಎಂದಿದ್ದಾರೆ.

ಜೊತೆಗೆ ಸಿನಿಮಾದಲ್ಲಿ ಅವಕಾಶ ಸಿಗುತ್ತಿಲ್ಲ ಎಂದಲ್ಲ. ಆದರೆ ಕೆಲಸವಿಲ್ಲದ ದಿನಗಳೇ ಹೆಚ್ಚು. ಆದ್ದರಿಂದ ನನ್ನ ಜೀವನ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಜನರೇಶನ್‌ ಗ್ಯಾಪ್‌ನಿಂದ ಅವಕಾಶಗಳು ಕೈತಪ್ಪುತ್ತಿದೆ. ಯಾವತ್ತೂ, ಯಾರ ಮುಂದಯೂ ಕೈಚಾಚಿ ನಿಲ್ಲುವ ಸ್ವಭಾವ ನನ್ನದಲ್ಲ. ಜೊತೆಗೆ ನನ್ನ ಕೆಲಸದ ಬಗ್ಗೆ ನನಗೆ ಹೆಮ್ಮೆಯಿದೆ ಎಂದಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com