ಉಗ್ರ ಹಫೀಜ್‌ ಜೊತೆ ವೇದಿಕೆ ಹಂಚಿಕೊಂಡಿದ್ದ ಪ್ಯಾಲಿಸ್ತೇನ್‌ ರಾಯಭಾರಿಗೆ ಗೇಟ್ ಪಾಸ್‌

ದೆಹಲಿ : ಪಾಕಿಸ್ತಾನದಲ್ಲಿ ರಾಯಭಾರಿಯಾಗಿದ್ದ ಪ್ಯಾಲಿಸ್ತೇನ್‌ನ ವಾಲಿದ್‌ ಅಬು ಅಲಿಯನ್ನು ವಾಪಸ್‌ ಕರೆಸಿಕೊಳ್ಳಲಾಗಿದೆ.

ವಾಲಿದ್‌, ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌ ಉಗ್ರ ಹಫೀಜ್‌ ಸಯೀದ್‌ ಜೊತೆ ರಾವಲ್ಪಿಂಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ಫೋಟೋ ಈಗ ಎಲ್ಲೆಡೆ ವೈರಲ್‌ ಆಗಿದ್ದು, ಪ್ಯಾಲಿಸ್ತೇನ್‌ ವಾಲಿದ್‌ರನ್ನು ವಾಪಸ್‌ ಕರೆಸಿಕೊಂಡಿದೆ. ಅಷ್ಟೇ ಅಲ್ಲದೆ ವಾಲಿದ್‌ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪ್ಯಾಲಿಸ್ತೇನ್‌ ಅಧಿಕಾರಿಗಳು, ಸಯೀದ್‌ ಜೊತೆ ವೇದಿಕೆ ಹಂಚಿಕೊಂಡಿದ್ದು, ಅಪರಾಧ ಎಂದಿದೆ.

ಲಷ್ಕರೆ ತೊಯ್ಬಾ ಹಾಗೂ ಜಮಾತ್‌ ಉದ್‌ ದಾವಾ ಸಂಘಟನೆಗಳು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಾಲಿದ್‌ ಉಪಸ್ಥಿತರಿದ್ದರು. ಇದನ್ನು ಪ್ಯಾಲಿಸ್ತೇನ್‌ ಖಂಡಿಸಿದ್ದು, ವಾಲಿದ್ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.

 

Leave a Reply

Your email address will not be published.