ಪದ್ಮಾವತಿ ಅಲ್ಲ “ಪದ್ಮಾವತ್” : ಅಂತೂ CBFC ಯಿಂದ ಸಿಕ್ತು ಷರತ್ತು ಬದ್ದ ಸರ್ಟಿಫಿಕೇಟ್

ದೆಹಲಿ : ತೀವ್ರ ವಿವಾದಕ್ಕೆ ಕಾರಣವಾಗಿದ್ದ ಸಂಜಯ್‌ ಲೀಲಾ ಬನ್ಸಾಲಿ ಅವರ ಪದ್ಮಾವತಿ ಚಿತ್ರಕ್ಕೆ ಸೆನ್ಸಾರ್‌ ಬೋರ್ಡ್‌ ಕೊನೆಗೂ ಯು/ಎ ಸರ್ಟಿಫಿಕೇಟ್ ನೀಡಿದ್ದು, ಜೊತೆಗೆ ಷರತ್ತು ವಿಧಿಸಿದೆ.
ಸಿನಿಮಾದ ಒಟ್ಟು 26 ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಿರುವುದಲ್ಲದೆ ಪದ್ಮಾವತಿ ಹೆಸರಿನ ಬದಲಿಗೆ ಪದ್ಮಾವತ್ ಎಂದು ಬದಲಿಸುವಂತೆ ಸೂಚಿಸಿದೆ. ಈ ಎಲ್ಲಾ ಬದಲಾವಣೆಗಳ ಬಳಿಕ ಸಿನಿಮಾಗೆ ಸರ್ಟಿಫಿಕೇಟ್‌ ನೀಡುವುದಾಗಿಯೂ ಹೇಳಿದೆ.
ದೀಪಿಕಾ ಪಡುಕೋಣೆ, ಶಾಹಿದ್‌ ಕಪೂರ್‌ ಹಾಗೂ ರಣವೀರ್‌ ಸಿಂಗ್ ಅಭಿನಯದ ಪದ್ಮಾವತಿ ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದ್ದು, ರಜಪೂತರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಕರ್ಣಿ ಸೇನೆ ಚಿತ್ರ ಬಿಡುಗಡೆಗೆ ಅಡ್ಡಿ ಮಾಡಿತ್ತು. ಒಂದು ವೇಳೆ ಸಿನಿಮಾ ಬಿಡುಗಡೆಯಾದಲ್ಲಿ ಚಿತ್ರಮಂದಿರಗಳನ್ನೇ ಸುಟ್ಟು ಹಾಕುವುದಾಗಿಯೂ ಬೆದರಿಕೆಯೊಡ್ಡಿತ್ತು. ಕೆಲ ರಾಜ್ಯಗಳಲ್ಲಿ ಪದ್ಮಾವತಿ ಚಿತ್ರಕ್ಕೆ ನಿಷೇಧ ಹೇರಲಾಗಿತ್ತು.
ಡಿಸೆಂಬರ್‌ 1ರಂದು ತೆರೆಕಾಣಬೇಕಿದ್ದ ಸಿನಿಮಾಗೆ ಸೆನ್ಸಾರ್‌ ಮಂಡಳಿಯಿಂದ ಸರ್ಟಿಫಿಕೇಟ್‌ ಸಿಗದ ಕಾರಣ ಚಿತ್ರ ಬಿಡುಗಡೆ ತಡವಾಗಿತ್ತು. ಆದರೆ ಈಗ ಸಿನಿಮಾದ ದೃಶ್ಯಗಳಿಗೆ ಕತ್ತರಿ ಹಾಕಿದ್ದು, ಕೊನೆಗೂ ಪದ್ಮಾವತಿಗೆ ಕೊಂಚ ರಿಲೀಫ್‌ ಸಿಕ್ಕಂತಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com