Ranaji Final : ಗುರ್ಬಾನಿ ಹ್ಯಾಟ್ರಿಕ್ ಮಿಂಚು : ಫಜಲ್, ಜಾಫರ್ ಅರ್ಧಶತಕ

ಇಂದೋರ್ ನ ಹೋಲ್ಕರ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದ ಎರಡನೇ ದಿನದ ಗೌರವವನ್ನು ಉಭಯ ತಂಡಗಳು ಹಂಚಿಕೊಂಡಿವೆ. ರಜನೀಶ್ ಗುರ್ಬಾನಿ ಹ್ಯಾಟ್ರಿಕ್ ದಾಳಿಗೆ ತುತ್ತಾದ ದೆಹಲಿ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 295ಕ್ಕೆ ಆಲೌಟ್ ಆಯಿತು.

ದೆಹಲಿ ಪರವಾಗಿ ಶುಕ್ರವಾರ ಶತಕ ಬಾರಿಸಿದ್ದ ಧ್ರುವ್ ಶೋರೆ 145 ರನ್ ಗಳಿಸಿ ಔಟಾದರು. ವಿದರ್ಭ ತಂಡದ ಪರವಾಗಿ ರಜನೀಶ್ ಗುರ್ಬಾನಿ 6, ಆದಿತ್ಯ ಠಾಕರೆ 2 ವಿಕೆಟ್ ಪಡೆದರು.

ಮೊದಲ ಇನ್ನಿಂಗ್ಸ್ ಆರಂಭಿಸಿರುವ ವಿದರ್ಭ ಎರಡನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿದೆ. ವಿದರ್ಭ ತಂಡದ ನಾಯಕ ಫೈಜ್ ಫಜಲ್ 67, ಸಂಜಯ್ ರಾಮಸ್ವಾಮಿ 31 ರನ್ ಗಳಿಸಿದರು. ಅರ್ಧಸತಕ ಬಾರಿಸಿರುವ ವಾಸಿಮ್ ಜಾಫರ್ (67*) ಹಾಗೂ ಅಕ್ಷಯ್ ವಖಾರೆ ಅಜೇಯರಾಗುಳಿದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com