New year ಆಚರಣೆಗೆ ಅವಲಬೆಟ್ಟ, ನಂದಿಬೆಟ್ಟಕ್ಕೆ ಹೋಗುವವರು ಈ ಸುದ್ದಿಯನ್ನೊಮ್ಮೆ ಓದಿ…

ಚಿಕ್ಕಬಳ್ಳಾಪುರ : ಹೊಸ ವರ್ಷಾಚರಣೆಗೆ ನಂದಿ ಬೆಟ್ಟ, ಅವಲ ಬೆಟ್ಟ ಹೋಗಬೇಕು ಎಂದು ಪ್ಲಾನ್‌ ಮಾಡಿಕೊಂಡಿರುವವರಿಗೆ ಒಂದು ಕಹಿ ಸುದ್ದಿ. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟ ಹಾಗೂ ಅವಲ ಬೆಟ್ಟದಲ್ಲಿ ಹೊಸವರ್ಷಾಚರಣೆಗೆ ಪೊಲೀಸರು ನಿಷೇಧ ಹೇರಿದ್ದಾರೆ.

ಡಿಸೆಂಬರ್‌ 31ರ ಸಂಜೆ 4 ಗಂಟೆಯಿಂದ ಜನವರಿ 1ರ ಬೆಳಗ್ಗೆ 8 ಗಂಟೆಯವರೆಗೆ ನಂದಿ ಬೆಟ್ಟ ಹಾಗೂ ಅವಲ ಬೆಟ್ಟಕ್ಕೆ ಹೋಗದಂತೆ ನಿಷೇಧ ಹೇರಲಾಗಿದೆ. ಜನವರಿ 1ರ 8 ಗಂಟೆಯ ಬಳಿಕ ಎಂದಿನಂತೆ ಪ್ರವಾಸಿಗರಿಗೆ ಪ್ರವೇಶ ಇರುತ್ತದೆ.

ಸಾರ್ವಜನಿಕರ ಹಿತದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಪ್ರತೀ ವರ್ಷದಂತೆ ಈ ವರ್ಷವೂ ನಿಷೇಧ ಹೇರಲು ಪೊಲೀಸರು ನಿರ್ಧರಿಸಿದ್ದು, ಪ್ರವಾಸಿಗರು ಸಹಕರಿಸುವಂತೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ ರೆಡ್ಡಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಹಿತಕರ ಘಟನೆ ನಡೆಯದಂತೆ ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಂಡಿರುವುದಾಗಿಯೂ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com