ದೇವರು ಪ್ರತ್ಯಕ್ಷನಾದ್ರೆ ಅವನನ್ನ ಕೊಂದು ದೇವಸ್ಥಾನ ಕಟ್ಟಿಸ್ತಾರೆ : BJP ವಿರುದ್ಧ ದ್ವಾರಕಾನಾಥ್‌ ಕಿಡಿ

ಚಾಮರಾಜನಗರ : ಒಂದು ವೇಳೆ ದೇವರು ಪ್ರತ್ಯಕ್ಷವಾದೆ ಆತನನ್ನು ಸಾಯಿಸಿ ಬಳಿಕ ದೇವಸ್ಥಾನ ಕಟ್ಟುತ್ತಾರೆ. ನಿಜವಾದ ರಾಮ, ಶಿವನಂತಹ ದೇವರು ಇವರಿಗೆ ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ರಾಜಕೀಯಕ್ಕೆ ಬಳಕೆಯಾಗುವ ದೇವರುಗಳಷ್ಟೇ ಎಂದು ಹಿರಿಯ ವಕೀಲ ಡಾ. ಸಿ.ಎಸ್‌ ದ್ವಾರಕಾನಾಥ್‌ ಹೇಳಿದ್ದಾರೆ.

ಚಾಮರಾಜನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹಿಂದುಪರ ಸಂಘಟನೆಗಲ ವಿರುದ್ಧ ಕಿಡಿಕಾರಿದ್ದಾರೆ. ನಿಮ್ಮ ರಾಮನನ್ನು ನೀವೇ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದೀರ. ನಿಮ್ಮ ರಾಮ ನನ್ನ ರಾಮನಾಗಲು ಸಾಧ್ಯವಿಲ್ಲ. ವಾಲ್ಮೀಕಿ, ಕುವೆಂಪು ಅವರು ಹೇಳುವ ರಾಮನೇ ಬೇರೆ, ನೀವು ಹೇಳುವ ರಾಮನೇ ಬೇರೆ ಎಂದಿದ್ದಾರೆ.

ಕಾಂಗ್ರೆಸ್‌ಗೂ ಬಿಜೆಪಿಗೂ ಯಾವುದೇ ವ್ಯತ್ಯಾಸವಿಲ್ಲ. ಇವರ ಝಂಡಾ ಬೇರೆ ಅಷ್ಟೇ ಆದರೆ ಅಜೆಂಡಾ ಒಂದೇ ಎಂದಿದ್ದರೆ. ಇದೇ ವೇಳೆ ಸಚಿವ ಹೆಗಡೆ ಕುರಿತು ಮಾತನಾಡಿದ ಅವರು, ಆತ ವಿಕೃತ ಮನುಷ್ಯ. ಜಾತ್ಯಾತೀತರ ತಂದೆ ತಾಯಿ ಬಗ್ಗೆ ಪ್ರಶ್ನೆ ಮಾಡುತ್ತಾನೆ. ನಮ್ಮ ತಂದೆ ತಾಯಿ ಬಗ್ಗೆ ನಿರೂಪಿಸಬೇಕಾದ ಅನಿವಾರ್ಯತೆ ನಮಗಿಲ್ಲ. ಅನುಮಾನವಿರುವ ನೀವು ನಿರೂಪಿಸಿ ಎಂದು ಟಾಂಗ್‌ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com