ಮೋದಿ ಟೀಕಿಸದಂತೆ JDS, BJP ಟೀಕಿಸದಂತೆ HDD : ಮತ್ತೆ ಒಂದಾಗ್ತಾರಾ ಹಳೇ ದೋಸ್ತಿಗಳು..?

ಬೆಂಗಳೂರು : ಮಹದಾಯಿ ನದಿ ವಿವಾದದಲ್ಲಿ ಪ್ರಧಾನಿ ಮೋದಿ ಅವರನ್ನು ಟೀಕಿಸದಂತೆ ಮಾಜಿ ಪ್ರಧಾನಿ ಎಚ್‌.ಡ ದೇವೇಗೌಡರು ಪಕ್ಷದ ಸದಸ್ಯರಿಗೆ ಸೂಚನೆ ನೀಡಿದ್ದಾರೆ. ಇದಕ್ಕೂ ಮುನ್ನ ಬಿಜೆಪಿ ನಾಯಕರು ದೇವೇಗೌಡರು ಅಥವಾ ಜೆಡಿಎಸ್‌ ವಿರುದ್ದ ಟೀಕೆ ಮಾಡದಂತೆ ಬಿಜೆಪಿಗರಿಗೆ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ.
 ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಒಟ್ಟಾಗಿ ಸರ್ಕಾರ ರಚಿಸಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಬಿಜೆಪಿ ನಾಯಕರು 150 ಮಿಷನ್ ರಾಜ್ಯದಲ್ಲಿ ಕೈಕೊಡುತ್ತದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದು, ಇದಕ್ಕೆ ಪುಷ್ಠಿ ನೀಡುವಂತೆ ಎಚ್‌.ಡಿ ದೇವೇಗೌಡರ ವಿರುದ್ದ ಮಾತನಾಡದಂತೆ ಬಿಜೆಪಿಗರಿಗೆ ಹೈಕಮಾಂಡ್‌ ಸೂಚನೆ ನೀಡಿದೆ. ಆದ ಕಾರಣ ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷಗಳೆರಡೂ ಸೇರಿ ಸರ್ಕಾರ ರಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಳೆದ ಎರಡು ದಿನಗಳ ಹಿಂದಷ್ಟೇ ಸಚಿವ ಪೀಯೂಷ್ ಗೋಯಲ್‌ , ಎಚ್‌ ಡಿ ದೇವೇಗೌಡರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಇದೆಲ್ಲವೂ ಮೋದಿ ಹಾಗೂ ಅಮಿತ್ ಶಾ ತಂತ್ರದಂತೆ ನಡೆದಿರುವುದಾಗಿ ಬಣ್ಣಿಸಲಾಗುತ್ತಿದೆ.

ಕಾಂಗ್ರೆಸ್‌ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಬಿಜೆಪಿ ಎಷ್ಟೇ ಹೇಳಿದರೂ ವಾಸ್ತವ ಪರಿಸ್ಥಿತಿ ಅದಕ್ಕೆ ವಿರುದ್ದವಾಗಿದೆ. ಸದ್ಯದ ಪರಿಸ್ಥಿತಿ ನೋಡಿದರೆ ರಾಜ್ಯದಲ್ಲಿ ಯಾವ ಪಕ್ಷಕ್ಕೂ ಬಹುಮತ ಬರುವ ಸಾಧ್ಯತೆ ಇಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಎರಡೂ ಪಕ್ಷಗಳು ಈಗಿನಿಂದಲೇ ಸಂಧಾನ ಕಾರ್ಯ ಪ್ರಾರಂಭಿಸಿದಂತಿದ್ದು, ಒಂದು ವೇಳೆ ಸರಳ ಬಹುಮತ ಪಡೆಯದೇ ಹೋದರೆ ಬಿಜೆಪಿ ಹಾಗೂ ಜೆಡಿಎಸ್‌ ಸೇರಿ ಸರ್ಕಾರ ರಚಿಸುವ ಸಾಧ್ಯತೆ ಇದೆ.

One thought on “ಮೋದಿ ಟೀಕಿಸದಂತೆ JDS, BJP ಟೀಕಿಸದಂತೆ HDD : ಮತ್ತೆ ಒಂದಾಗ್ತಾರಾ ಹಳೇ ದೋಸ್ತಿಗಳು..?

  • December 31, 2017 at 7:09 PM
    Permalink

    Usei nofollow sim. Estes programas são chamados de robôs.

    Reply

Leave a Reply

Your email address will not be published.

Social Media Auto Publish Powered By : XYZScripts.com