ವೆಲ್ಡಿಂಗ್ ಕೆಲಸ ಮಾಡ್ತಿದಾರಾ Akhtar..? : ಪಾಕ್ ಬೌಲರ್ ಕಾಲೆಳೆದ Yuvraj..!

ಪಾಕಿಸ್ತಾನದ ಮಾಜಿ ವೇಗದ ಬೌಲರ್ ಹಾಗೂ ಭಾರತದ ಯುವರಾಜ್ ಸಿಂಗ್ ಪರಸ್ಪರರ ಎದುರು ಹಲವಾರು ಬಾರಿ ಕ್ರಿಕೆಟ್ ಆಡಿದ್ದಾರೆ. ಶೋಯೆಬ್ ಹಾಗೂ ಯುವಿ ಉತ್ತಮ ಸ್ನೇಹಿತರೂ ಆಗಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರಿನಲ್ಲಿ ಯುವಿ, ಅಖ್ತರ್ ಕಾಲೆಳಿದಿದ್ದಾರೆ.

Image result for yuvraj singh shoaib akhtar

ಶೋಯೆಬ್ ಅಖ್ತರ್ ಟ್ವಿಟರಿನಲ್ಲಿ ಯುವಜನತೆಗೆ ಪ್ರೇರಣೆ ನೀಡುವ ಉದ್ದೇಶದಿಂದ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದರು. ಈ ಫೋಟೊದಲ್ಲಿ ಅಖ್ತರ್, ವೆಲ್ಡಿಂಗ್ ಕೆಲಸ ಮಾಡುವ ಕಾರ್ಮಿಕನ ವೇಷ ತೊಟ್ಟಿದ್ದಾರೆ. ಟ್ವೀಟ್ ನಲ್ಲಿ ಶೋಯೆಬ್ “Don’t be afraid to be ambitious. About your goals. Hard work never stops. Neither should your dreams,” ಎಂದು ಬರೆದಿದ್ದರು.

ಈ ಟ್ವೀಟ್ ಗೆ ರಿಪ್ಲೈ ಮಾಡಿರುವ ಯುವರಾಜ್, ‘ Oh ta theek hai payan tusi welding karan kithe chale ho (ಅದೆಲ್ಲ ಸರಿ ಶೋಯೆಬ್, ವೆಲ್ಡಿಂಗ್ ಮಾಡಲು ಎಲ್ಲಿಗೆ ಹೊರಟಿದ್ದೀರಾ..?) ‘ ಎಂದು ಕೇಳಿ ಪಾಕ್ ಬೌಲರ್ ಕಾಲೆಳಿದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com