ಬೆಂಕಿ ಹಚ್ಚುವುದೇ ಶೋಭಾ ಕರಂದ್ಲಾಜೆ ಕೆಲಸ : ಸಚಿವ H. ಆಂಜನೇಯ

ವಿಜಯಪುರ : ಬೆಂಕಿ ಹಚ್ಚುವುದು, ಸಂಘರ್ಷಕ್ಕೆ ದಾರಿ ಮಾಡಿಕೊಡುವುದೇ ಸಂಸದೆ ಶೋಭಾ ಕರಂದ್ಲಾಜೆ ಅವರ ಕೆಲಸ ಎಂದು ಸಚಿವ ಎಚ್‌. ಆಂಜನೇಯ ಆರೋಪಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂಸಾಚಾರ, ಗಲಭೆ ನಡೆಯಲು ಶೋಭಾ ಪ್ರಚೋದಿಸುತ್ತಿದ್ದಾರೆ. ಅವರೇ ಎಲ್ಲಾ  ಕೋಮುಗಲಭೆಗಳಿಗೂ ಕಾರಣ. ಸಂಘರ್ಷಕ್ಕೆ  ದಾರಿಮಾಡಿಕೊಡುವುದೇ ಅವರ ಕೆಲಸ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಹಗುರವಾಗಿ ಮಾತನಾಡುವ ಶೋಭಾ ಕರಂದ್ಲಾಜೆ ಅವರ ಭಾಷೆಯೇ ಸರಿಯಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಆಧಿಕಾರಕ್ಕೆ ಬರುತ್ತದೆ. ಸಿದ್ದರಾಮಯ್ಯನವರೇ ಮುಂದಿನ ಸಿಎಂ ಆಗಲಿದ್ದಾರೆ. ಇದು ಶೋಭಾ ಕರಂದ್ಲಾಜೆಯವರಿಗೂ ಗೊತ್ತು ಅದಕ್ಕೆ ಕೀಳಾಗಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com