ಲೋಕಸಭೆಯಲ್ಲಿ ಮಸೂದೆ ಪಾಸಾದ ಮರುದಿನವೇ ಪತ್ನಿಗೆ ತ್ರಿವಳಿ ತಲಾಖ್‌ ನೀಡಿದ ಪತಿ

ಲಖನೌ : ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಕೇಂದ್ರ ಸರ್ಕಾರ ಗುರುವಾರ ಲೋಕಸಭೆಯಲ್ಲಿ ತ್ರಿವಳಿ ತಲಾಖ್‌ ಮಸೂದೆಯನ್ನು ಪಾಸು ಮಾಡಿತ್ತು. ಈ ಮಸೂದೆ ಪಾಸಾದ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬರಿಗೆ ವರದಕ್ಷಿಣಿ ನೀಡಲಿಲ್ಲ ಎಂಬ ಕಾರಣಕ್ಕೆ ಪತಿ ಮಹಾಶಯನೊಬ್ಬ ತ್ರಿವಳಿ ತಲಾಖ್‌ ನೀಡಿದ್ದಾನೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಸಂತ್ರಸ್ತ ಮಹಿಳೆಯನ್ನು ವಿರಶಾ ಎಂದು ಗುರುತಿಸಲಾಗಿದೆ. ವಿರಶಾಗೆ ಆಕೆಯ ಪತಿ ಪ್ರತಿ ನಿತ್ಯ 10 ಲಕ್ಷ ರೂ ವರದಕ್ಷಿಣೆ ತರುವಂತೆ ಬೇಡಿಕೆ ಇಟ್ಟು ಚಿತ್ರಹಿಂಸೆ ನೀಡುತ್ತಿದ್ದ.  ಆದರೆ ಆಕೆಯ ಅಸಹಾಯಕ ಪರಿಸ್ಥಿತಿ ತಿಳಿದ ಗಂಡ ಆಕೆಗೆ ತ್ರಿವಳಿ ತಲಾಖ್‌ ನೀಡಿದ್ದಾನೆ.

ಲೋಕಸಭೆಯಲ್ಲಿ ಗುರುವಾರವಷ್ಟೇ ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣಾ ಮಸೂದೆ ಮಂಡನೆಯಾಗಿತ್ತು. ಈ ಮಸೂದೆ ಪ್ರಕಾರ ಮುಸ್ಲಿಂ ಮಹಿಳೆಗೆ ಯಾವುದೇ ರೀತಿಯಲ್ಲಿ ತ್ರಿವಳಿ ತಲಾಖ್‌ ನೀಡುವುದು ಅಪರಾಧವಾಗಿದ್ದು, ಆ ರೀತಿ ತಲಾಖ್‌ ನೀಡಿದವನಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದು ಎಂದು ಹೇಳಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com