ನಾನು ಘೋಷಿಸಿರುವ ಅಭ್ಯರ್ಥಿಗಳ ಹೆಸರೇ ಅಂತಿಮವಲ್ಲ : BSY ಸ್ಪಷ್ಟನೆ

ಶಿವಮೊಗ್ಗ : ತಲಾಖ್ ವಿಧೇಯಕ ಐತಿಹಾಸಿಕ ವಿಧೇಯಕ. ನರೇಂದ್ರ ಮೋದಿ ಇದನ್ನು ಜಾರಿಗೆ ತರುವ ಧೈರ್ಯ ಮಾಡಿದ್ದಾರೆ. ಸೋನಿಯಾ ಗಾಂಧಿ ಗೋವಾದಲ್ಲೇ ಇರುವ ಕಾರಣ ಅವರು ಅಲ್ಲಿನ ಕಾಂಗ್ರೆಸ್ ನವರ ಮನವೊಲಿಸಿದ್ರೆ ಉತ್ತರ ಕರ್ನಾಟಕದ ರೈತರ ಹೋರಾಟಕ್ಕೆ ಬೆಲೆ ಸಿಕ್ಕಂತಾಗುತ್ತದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಬಿಎಸ್‌ವೈ, ಸಿದ್ದರಾಮಯ್ಯನವರು 2014 ರಲ್ಲಿ ಒಂದು ಹನಿ ನೀರು ಬಳಸುವುದಿಲ್ಲ ಎಂದು ನ್ಯಾಯಾಧಿಕರಣಕ್ಕೆ ಏಕ ಪಕ್ಷೀಯ ಮುಚ್ಚಳಿಕೆ ಬರೆದು ಕೊಟ್ಟಿರುವುದು ಸರಿಯಲ್ಲ. ಸಿಎಂ ಸಿದ್ದರಾಮಯ್ಯ ಶಿವಮೊಗ್ಗ ಜಿಲ್ಲೆಗೆ ಕೊಟ್ಟ ಕೊಡುಗೆ ಏನು ಎಂದು ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಬಿಜೆಪಿ ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ನಮಗೆ ನಿಶ್ಚಿತ ಬಹುಮತ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ಕಾಂಗ್ರೆಸ್ ಗೆ ಮಹಾದಾಯಿ ಸಮಸ್ಯೆ ಬಗೆಹರಿಸುವ ಮನಸಿಲ್ಲ. ಈಗ ಮೋದಿ ಬಗ್ಗೆ ಪ್ರಶ್ನೆ ಮಾಡುವ ಕಾಂಗ್ರೆಸ್ ನವರು ಹಿಂದೆ ಅವರದೆ ಸರ್ಕಾರ ಇದ್ದಾಗ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರುವ ಬಿಎಸ್‌ವೈ, ನಾನು ಎಲ್ಲಿ ಪೈಪೂಟಿ ಇಲ್ಲ ಅಲ್ಲಿ ಅಭ್ಯರ್ಥಿ ಹೆಸರು ಘೋಷಣೆ ಮಾಡಿದ್ದೇನೆ. ಇದೆ ಅಂತಿಮವಲ್ಲ. ನಮ್ಮ ರಾಷ್ಟ್ರೀಯ ಅಧ್ಯಕ್ಷರು ಇನ್ನೂ ಒಂದು ಸರ್ವೆ ನಡೆಸಿ, ನಂತರ ಅವರೆ ಟಿಕೇಟ್ ಘೋಷಣೆ ಮಾಡುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com