ಮಂಗಳೂರಿನಲ್ಲಿ ನೈತಿಕ ಪೊಲೀಸ್‌ಗಿರಿ : ಅನ್ಯ ಕೋಮಿನ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

ಮಂಗಳೂರು : ರಾತ್ರಿ ವೇಳೆ ಕಾಡಿನಲ್ಲಿ ರಾಸಲೀಲೆ ನಡೆಸುತ್ತಿದ್ದ ಭಿನ್ನ ಕೋಮಿನ ಜೋಡಿ ಮೇಲೆ ನೈತಿಕ ಪೊಲೀಸ್ ಗಿರಿ ನಡೆದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಬೆದ್ರಬೆಟ್ಟು ಬಳಿ ನಡೆದಿದೆ.

ಬೆದ್ರಬೆಟ್ಟು ಸಾಮಾಜಿಕ ಅರಣ್ಯದಲ್ಲಿ ಯುವತಿ ಜೊತೆ ಖಾಸಗಿ ಬಸ್ ಕಂಡಕ್ಟರ್ ಕೈಕಂಬ ನಿವಾಸಿ ಇರ್ಷಾದ್ ರಾಸಲೀಲೆಯಲ್ಲಿ ತೊಡಗಿದ್ದ. ಇದನ್ನು ನೋಡಿದ ಸ್ಥಳೀಯರು ಹಿಂದೂ ಸಂಘಟನೆ ಕೆಲ ಕಾರ್ಯಕರ್ತರ ಜೊತೆ ಸೇರಿಕೊಂಡು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಯುವಕನನ್ನು ಬಿಟ್ಟು ಕಳುಹಿದ್ದಾರೆ. ಇನ್ನು ಇರ್ಷಾದ್ ಗೆ ಮದುವೆಯಾಗಿ ಒಂದು ವರ್ಷದ ವರ್ಷದ ಮಗುವಿದೆ ಎಂದು ತಿಳಿದುಬಂದಿದೆ. ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Leave a Reply

Your email address will not be published.