ಕನ್ನಡದ ಖ್ಯಾತ ವಿಜ್ಞಾನ ಸಾಹಿತಿ, ಲೇಖಕ ಜೆ.ಆರ್‌ ಲಕ್ಷ್ಮಣರಾವ್‌ ವಿಧಿವಶ

ಮೈಸೂರು : ಕನ್ನಡದ ಖ್ಯಾತ ವಿಜ್ಞಾನ ಲೇಖಕ ಜೆ.ಆರ್‌ ಲಕ್ಷ್ಮಣರಾವ್‌ ನಿಧನರಾಗಿದ್ದಾರೆ. ಮೂಲತಃ ದಾವಣಗೆರೆಯ ಜಗಳೂರಿನವರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದರು. ಇವರಿಗೆ 97 ವರ್ಷ ವಯಸ್ಸಾಗಿತ್ತು.
1921ರ ಜನವರಿಯಲ್ಲಿ ರಾಘವೇಂದ್ರ ರಾವ್‌ ಹಾಗೂ ನಾಗಮ್ಮ ಅವರ ಪುತ್ರನಾಗಿ ಜನಿಸಿದ್ದರು. ಜಗಳೂರಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ, ದಾವಣಗೆರೆಯಲ್ಲಿ ಫ್ರೌಢಶಾಲೆಯ ವಿದ್ಯಾಭ್ಯಾಸ ಮುಗಿಸಿದ್ದರು. ಬಳಿಕ ಮೈಸೂರಿನ ಇಂಟರ್‌ಮೀಡಿಯೇಟ್‌ ಕಾಲೇಜಿನಿಂದ ಇಂಟರ್‌ ಮೀಡಿಯೇಟ್‌ ಪದವಿ ಪಡೆದಿದ್ದರು.
ಬಳಿಕ ಮೈಸೂರು ವಿವಿಯಿಂದ ಬಿಎಸ್ಸಿ, ಎಂಎಸ್ಸಿ ಪದವಿ ಪಡೆದ ಇವರು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು.
ಇವರಿಗೆ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಇದ್ದು, ಇದಕ್ಕೆ ಸಂಬಂಧಿಸಿದ 30ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. ಅಲ್ಲದೆ ಇವರ ಜೀವಿತಾವಧಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿಜ್ಞಾನಕ್ಕೆ ಸಂಬಂಧಪಟ್ಟ ಲೇಖನಗಳನ್ನ ರಚಿಸಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ 2016ರಲ್ಲಿ ಇವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನೂ ನೀಡಲಾಗಿತ್ತು.

Leave a Reply

Your email address will not be published.

Social Media Auto Publish Powered By : XYZScripts.com