ಕುವೆಂಪು ಜನ್ಮದಿನ : ‘ರಾಮಾಯಣ ದರ್ಶನಂ’ನ ಕರ್ತೃು, ರಸಋಷಿಗೆ ನುಡಿನಮನ

ಕುವೆಂಪುರವರ ಕೃತಿ ಶ್ರೀರಾಮಾಯಣ ದರ್ಶನಂ ಜ್ಞಾನಪೀಠ ಪ್ರಶಸ್ತಿ ಪಡೆದ ಸುವರ್ಣಮಹೋತ್ಸವ ಆಚರಿಸುವ ಸಂದರ್ಭದಲ್ಲಿ

’ರಾಮಾಯಣ ದರ್ಶನಂ’ ಒಬ್ಬ ಕುವೆಂಪುವನ್ನೇ ಸೃಷ್ಟಿಸಿತು ಎಂದು ಕುವೆಂಪು ಹೇಳುತ್ತಾರೆ. ಕಾವ್ಯ ಪ್ರಯೋಜನಗಳಲ್ಲಿ ಆತ್ಮಸಂತೋಷವೂ ಒಂದು ಎಂದು ಹೇಳುವಲ್ಲಿ, ದರ್ಶನ ತುಂಬ ಒಳ್ಳೆಯ ಕೆಲಸ ಮಾಡಬಲ್ಲದು. ಜೊತೆಗೆ ಜಗದ ಜನರಿಗೆ ನೀತಿ ಬೋಧನೆ ಮಾಡುವ ನೀತಿ ಸಮ್ಮತವೂ ಆಗಿದೆ.

ಡಿ.ವಿ.ಜಿ. ಯವರು ಕಾವ್ಯ & ಪ್ರಯೋಜನ ಕುರಿತು ಈ ರೀತಿ ಹೇಳುತ್ತಾರೆ.

“ಜನಕ್ಕೆ ಒಂದು ನೆಮ್ಮದಿಯನ್ನು, ಒಂದು ಚಿತ್ತ ಸ್ವಾಸ್ಥ್ಯವನ್ನು, ಒಂದು ಸಹನೆಯನ್ನು,  ಒಂದು ಭರವಸೆಯನ್ನು, ನೀಡುವುದೇ ಮಹೋಕಾರ, ಅಷ್ಟೇ ಅಲ್ಲ ಮಾನವನ ಹೃದಯಾಂತರಾಳದಲ್ಲಿ ಒಂದು ವಿದ್ಯುದಂಶವೂ ಉಂಟು: ಒಂದು ಅಮೃತ ಕಣವುಂಟು, ಒಂದು ಧರ್ಮ ಬೀಜವುಂಟು: ಆ ಅಂತಸ್ಸಂಪತ್ತನ್ನು ಹೊರಕ್ಕೆ ತೆಗೆದಲ್ಲದೆ ಸಂತೋಷ ಶಾಂತಗಳಿಲ್ಲ”

ಈ ರೀತಿಯಾಗಿ ಕುವೆಂಪುರವರ ಈ ಕೃತಿಯ ಅವರದೇ ಸೃಷ್ಟಿಯ ಒಂದು ದಿವ್ಯತ್ವ, ಒಂದು ಮಹಾಬೆಳಕು. ಅದು ಸಾರ್ವತ್ರಿಕ ಸತ್ಯವಾಗಿ, ಕಾಲಾತೀತ ಪರಿಣಾಮ ಬೀರಿತು. ಇಲ್ಲಿ ಕವಿಯ ಪ್ರಕಾರ ಜಗದ ಜನರೆಲ್ಲ ಆದರ್ಶ ವ್ಯಕ್ತಿಗಳೇ ಇಲ್ಲಿನ ಕಾವ್ಯದ ಮೌಲ್ಯ, ಜಗದ ವ್ಯಕ್ತಿಗಳಲ್ಲಿನ ಆದರ್ಶಯುತ ವ್ಯಕ್ತಿತ್ವವನ್ನು ಹೊರಗೆಡುವುದೇ ಆಗಿದೆ.

Image result for kuvempu

ಹಾಗಾದರೇ ಇಷ್ಟೆಲ್ಲಾ ಹೇಳುವ ಅಗತ್ಯವಾದರೂ ಏನಿತ್ತು ? ಕುವೆಂಪುರವರ ಸಾಹಿತ್ಯವೆಲ್ಲಾ ಒಂದು ಚಿತ್‌ಪ್ರಕಾಶವೇ. ಆದರೂ ಅದರಲ್ಲಿಯೇ ಶ್ರೇಷ್ಠತೆ ಬರುವದು ಒಂದು ತಪಸ್ಸೆಂದೇ ಸಿದ್ಧಿಸಿರುವ ಕೃತಿ “ಶ್ರೀ ರಾಮಾಯಣ ದರ್ಶನಂ”. ಸುಮಾರು ೯ ವರ್ಷಗಳಷ್ಟು ದೀರ್ಘಾವಧಿಯ ಸುಸಮಯದಲ್ಲಿ ತಮ್ಮಲ್ಲಿನ ಜ್ಞಾನಕ್ಕೆ ಅಂತರ್ ಚಕ್ಷುವಿನ ಹೊಳಹನ್ನು ನೀಡಿ, ಕಾವ್ಯ-ತಪಸ್ವಿನಿಯನ್ನು ಸಾಕಾರಗೊಳಿಸಿದರು. ಅಂದರೆ 1936–1945ರ ಅವಧಿ ಅದೊಂದು ನಿಜ-ನಿರ್ಮಲ ಕಾವ್ಯ ತಪಸ್ಸೇ ಆಗಿತ್ತು. ಅಂತಹ ಸುದೀರ್ಘ ಸಿದ್ಧಿಯ ಫಲವೇ “ಶ್ರೀ ರಾಮಾಯಣ ದರ್ಶನಂ.” ಇದು ಕೇವಲ ವಾಲ್ಮೀಕಿಯ ರಾಮಾಯಣದ ಮರುಸೃಷ್ಟಿಯಲ್ಲ. ಭಾರತಮಾತೆಗೆ ಕನ್ನಡದ ಕಳಸದ ತೇರು ಇದ್ದು ಮೇರುಕೃತಿ, ಇದಕ್ಕಾಗಿ ಕೇವಲ ಕನ್ನಡವಷ್ಟೇ ಅಲ್ಲ. ಇಡೀ ಪ್ರಪಂಚದ ಶುದ್ಧಾತ್ಮಗಳ ಕಾವ್ಯತ್ವದ ರೂವಾರಿಗಳನ್ನೆಲ್ಲಾ ಕುವೆಂಪು ಗುರುಗಳಾಗಿ ಸ್ವೀಕರಿಸಿ ಅವರಿಗೆ ಕೃತಜ್ಞತಾ ಭಾವ ಮೂಡಿಸಿದ್ದಾರೆ.

ರಾಮಾಯಣದ ಕತೆಗಳ ಭಾರದಿಂದ ಫಣಿರಾಯ ತಿಣುಕಿದ, ಎಂದು 1000 ವರ್ಷಗಳಷ್ಟು ಹಿಂದೆಯೇ ಪಂಪ ಹೇಳುತ್ತಾ. ಆದರೂ ಅಂತಹ ಕತೆಗೆ ಹೊಸ-ರೂಪ ನೀಡಿ ಕೇವಲ ಅದನ್ನು ಕಥೆಯಾಗಿರಿಸದೇ ಹೊಸದೊಂದು, ದರ್ಶನವನ್ನೇ ನೀಡಿದ್ದಾರೆ, ಅಂದರೆ ಮಾನವುದ್ದಾರದ ಭರವಸೆಯೇ ಇಲ್ಲಿ ವ್ಯಕ್ತವಾಗಿದೆ. ಭರವಸೆಯೇ ಮನುಷ್ಯನ ಬೆಳಕು. ಇಲ್ಲಿ ನಿರಾಸೆಗೆ ಜಾಗವೇ ಇಲ್ಲ. ಜಗತ್ತಿನ ಯಾವ ಸಾಹಿತ್ಯದಲ್ಲೂ ಇಲ್ಲದ ವಿಶೇಷ ಧ್ವನಿ ಇಲ್ಲಿ ಎತ್ತವಾಗಿದೆ.

“ಜ್ಞಾನಪೀಠ ಪ್ರಶಸ್ತಿ”ಯು ಭಾರತದ ಸಾಹಿತ್ಯದಲ್ಲಿ ಅತ್ಯುನ್ನತ ಪ್ರಶಸ್ತಿ. 1965 ರಿಂದ 1981 ರವರೆಗೆ ಸಾಹಿತಿಯೊಬ್ಬರ ಒಂದು ಶ್ರೇಷ್ಠ ಕೃತಿಗೆ ಮಾತ್ರ ಈ ಪ್ರಶಸ್ತಿ ನೀಡಲಾಗುತ್ತಿತ್ತು. ಅಲ್ಲಿಂದೀಚೆಗೆ ಅಂದರೆ 1982 ರಿಂದ ಸಾಹಿತಿಯ ಒಟ್ಟು ಜೀವಮಾನದ ಸಾಹಿತ್ಯ ಸಾಧನೆಗೆ ಈ ಪ್ರಶಸ್ತಿ ಪರಿಗಣಿಸಲಾಗುತ್ತಿದೆ. ಇದು “ಭಾರತೀಯ ಜ್ಞಾನಪೀಠ” ಎಂಬ ಸಂಶೋಧನೆ & ಸಾಂಸ್ಕೃತಿಕ ಸಂಸ್ಥೆಯು ನೀಡುವ ಪ್ರಶಸ್ತಿ. 1961ರಲ್ಲಿ ಭಾರತದ ಸಂವಿಧಾನದಲ್ಲಿ ಮನ್ನಣೆ ಪಡೆದಿರುವ ಎಂಟನೇ ಪರಿಚ್ಛೇದದ ಪಟ್ಟಿಯಲ್ಲಿನ ಭಾರತೀಯ ಭಾಷೆಗಳ ಒಂದು ಕೃತಿಗೆ “ಜ್ಞಾನಪೀಠ ಪ್ರಶಸ್ತಿ” ನೀಡುವ ಯೋಜನೆ ಪ್ರಾರಂಭವಾಯಿತು. 1965ರಲ್ಲಿ ಪ್ರಥಮ ಜ್ಞಾನಪೀಠ ಪ್ರಶಸ್ತಿಯನ್ನು ಮಲೆಯಾಳಂ ಲೇಖಕ ಜಿ. ಶಂಕರ ಕುರುಪ್ ಅವರಿಗೆ ದೊರೆಯಿತು. ಎಡರನೇ ಪ್ರಶಸ್ತಿ ಬಂಗಾಳದ ಲೇಳಕ ತಾರಾಶಂಕರ ಬಂಡೋಪಾಧ್ಯಾಯರಿಗೆ ದೊರೆಯಿತು.

Related image

ಮೂರನೇ ಪ್ರಶಸ್ತಿ 1967 ರಲ್ಲಿ ನಮ್ಮ ಕನ್ನಡ ರಾಷ್ಟ್ರಕವಿ, ಹೆಮ್ಮೆಯ ಕವಿ ಕುವೆಂಪುರವರಿಗೆ & ಗುಜೂತನ ಉಮಾಶಂಕರೊಂದಿಗೆ ಸೇರಿಸಿ ಲಭಿಸಿತು. ಅಂದರೆ ಇಲ್ಲಿಗೆ ನಮ್ಮ ಕನ್ನಡ ಸಾಹಿತ್ಯಕ್ಕೆ ಆ ಪ್ರಶಸ್ತಿ ಪಡೆದು 50 ವರ್ಷ ಅಂದರೆ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಪೂರ್ಣಕಾಲವಾಗಿದೆ. ಇಲ್ಲಿಯವರೆಗೆ ಹಿಂದಿಗೆ (11) ಬಂದು ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಕನ್ನಡಕ್ಕೆ ಎರಡನೇಸ್ಥಾನ, ಒಟ್ಟ (8) ಪ್ರಶಸ್ತಿಗಳಿಗೆ ಭಾಜನವಾಗಿದೆ. ನಂತದರಲ್ಲಿ ಬಂಗಾಳಿ-೬, ಮಲೆಯಾಳಂ-೫, ಗುಜರಾತ್, ಮರಾಠಿ, ಈಡುತಾ & ಉರ್ದು-ಯಲಾಟಿ, ಕೊಂಕಣಿ, & ಸಂಸ್ಕೃತ (ತಲಾ 1) ಸಲ ಪ್ರಶಸ್ತಿ ಪಡೆದಿದ್ದಾರೆ.

Image result for kuvempu

ನಮ್ಮ ಕನ್ನಡ ಸಾಹಿತಿಗಳು ಕುವೆಂಪು-1967, ದ.ರಾ. ಬೇಂದ್ರ – 1973 ಶಿವರಾಮ ಕಾರಂತ-1977, ಮಾಸ್ತಿ ವೆಂಕಟೇಶ ಅಯ್ಯಂಗಾರ, ವಿ.ಕೆ. ಗೋಕಾಕ-1990 ಯು.ಆರ್.ಅನಂತ 1983, ಮೂಲೆ-1994 ಗಿರೀಶ್ ಕಾರ್ನಾಡ-1998, ಚಂದ್ರಶೇಖರ ಕಂಬಾರ-2010
“ಪಾಪಿಗುದ್ದಾರಮಿಹುದೌ ಸೃಷ್ಟಿಯ ಮಹದ್‌ವ್ಯೂಹ ರಚನೆಯಲಿ” ಎಂಬ ಧ್ವನಿ ಮಹಾಕೃತಿಯುದ್ದಕ್ಕೂ ಪ್ರತಿಧ್ವನಿತವಾಗುತ್ತದೆ. ರಾಮಾಯಣದಿಂದ ರಾವಣನ  ರಾಕ್ಷಸತ್ವವೆಲ್ಲಾ ನಶಿಸಿ, ಅವನು ಅಮೃತತ್ವವನ್ನು ಪಡೆಯುತ್ತಾನೆ. ರಾಮಾಯಣದ ಸೀತಾಪಹರಣಕ್ಕೆ ಕಾರಣಳಾದ ಶೂರ್ಪನಖಿಯಲ್ಲಿ ಇಲ್ಲಿ ಪುಣ್ಯಸತಿಯ ಪ್ರಭಾವದಿಂದ ತನ್ನ ಪಾಪ ಕಳೆದುಕೊಂಡು ಉದ್ಧಾರವಾಗುತ್ತಾ. ಆದ್ದರಿಂದ ಇದೊಂದು ಕೇವಲ  ಮಹಾಕಾವ್ಯವಲ್ಲ. ಆಧ್ಯಾತ್ಮವ ಮೇಳೈವಿಸಿಕೊಂಡು ದಾರ್ಶನಿಕತೆಯ ಸ್ಪರ್ಶವನ್ನು ನೀಡುತ್ತದೆ. ಭಾರತೀಯ ಸಂಸ್ಕೃತಿಯ ಮಹಾಗಾನ ಇಲ್ಲಿ ಕಾವ್ಯವಿದೆ, ಕಥೆಯಿದೆ, ಮಹಾ ಪಾತ್ರಗಳ ಚಿತ್ರಣವಿದೆ, ಎಲ್ಲಕೂ ಮಿಗಿಲಾಗಿ, ದಾರ್ಶನಿಕತೆಯ ದರ್ಶನವಿದೆ. ಅಂದರೆ ಇಲ್ಲಿ ಖಳನಾಯಕರೇ ಇಲ್ಲ ಬದಲಿಗೇ ಪಾಪಿಗಳೂ ಪ್ರಾಯಶ್ಚಿತ್ತ ತಾಪದಿಂದ ನಾಯಕರೇ ಆಗುತ್ತಾg. ಇದು ಕೇವಲ ಭಾರತೀಯ ಸಂಸ್ಕೃತಿ ಪ್ರತಿನಿಧಿsತ್ವ ಎನ್ನುವದಕ್ಕಿಂತ, ವಿಶ್ವ ಸಾಹಿತ್ಯ ಮೇರುಗಳ ಪ್ರಭಾವವನ್ನು ಮೇಳೈಸಿಕೊಂಡು, ವಿಶ್ವ ಮಾನವತ್ವ ಸಾರುವ ಒಂದು ಅಮೂಲ್ಯ ಕೃತಿ, ಅದನ್ನೇ ಕುವೆಂಪು ಈ ರೀತಿ ಹೇಳುತ್ತಾರೆ.

Image result for kuvempu ramayana darshanam

“ಈ ಹೆಸರು ನಿಲ್ಲುವುದಕ್ಕೆ ಮುಂಚೆ ಎಷ್ಟೆಷ್ಟು ಆಲೋಚನೆಗಳ ಹೊಯ್ದಾಟ ಆಗಿ ಮುಗಿದಿತ್ತು; ಯಾವ ಹೆಸರನ್ನು ನೆನದರೂ ನನ್ನ ಮನಸ್ಸು ಒಪ್ಪುತ್ತಿರಲಿಲ್ಲ. ಪ್ರತಿಯೊಂದರಲ್ಲಿ ಏನೋ ಅರಕೆ ಕಾಣುತ್ತಿತ್ತು ಈ ಪದಗುಚ್ಧ ಹೊಳೆದಾಗ ಮಾತ್ರ ಸಮಾಧಾನ. ಅಂದರೆ ಇಲ್ಲಿ ಕತೆ ಬೇಕಾದವರಿಗೆ ಕತೆ, ದರ್ಶನ ಬೇಕಾಗಿದವರಿಗೆ ದರ್ಶನ ಸಿಗುತ್ತದೆ.

ಕನ್ನಡ ಸಾಹಿತ್ಯಕ್ಕೆ ಮೊದಲ ಜ್ಞಾನಪೀಠ ತಂದುಕೊಟ್ಟ ಕೃತಿ ’ಶ್ರೀರಾಮಾಯಣ ದರ್ಶನಂ’ ಪ್ರಶಸ್ತಿ ಬಂದು ಇಲ್ಲಿಗೆ ಸುಮಾರು 50 ವರ್ಷಗಳು ಸಂದಿವೆ. ಈ ಒಂದು ಸುವರ್ಣ ಕಾಲವನ್ನು ಸ್ತ್ರಿ ಸಮುದಾಯ ಕೂಡಾ ಖುಷಿಯಿಂದಲೇ ಸ್ವಾಗತಿಸುವದು ಅಷ್ಟೇ ಅವಶ್ಯ.

ಕುವೆಂಪುರವರ ಈ ಕೃತಿ ಕೇವಲ ರಾಮಾಯಣದ ಕತೆಯಲ್ಲ, ಅಲ್ಲೊಂದು ದಾರ್ಶನಿಕತೆಯ ದರ್ಶನ ಇದೆ. ಅಲ್ಲಿ ಏನಿಲ್ಲ ಎಂಬುದಕ್ಕಿಂತ ಏನೆಲ್ಲಾ ಹೊಸದಿದೆ, ಹೊಳಹಿದೆ ಎಂಬುದು ಬಹು-ಮುಖ್ಯವಾದ ಪ್ರಶ್ನೆ. ರಾಮಾಯಣದ ಅನೇಕ ಕೃತಿಗಳಲ್ಲಿ ತೆರೆಮರೆಯಲ್ಲಿ ಉಳಿದ ಪಾತ್ರಗಳನೇಕವು ಇಲ್ಲಿ ತಮ್ಮ ಪ್ರಾಮುಖ್ಯವನ್ನು ಮೆರೆದಿದೆ. ಆ ಪಾತ್ರಗಳು ಈಗಿನ  ಕೆಲಸವನ್ನು ನಿರ್ವಹಿಸಿದೆ ಅದರಲ್ಲೂ ಸ್ತ್ರೀ-ಪಾತ್ರಗಳಲ್ಲಿ ಹಿಂದೆ ನೋಡಿರದ ಅದೆಷ್ಟೋ ವಿಷಯಗಳು ನಮ್ಮ ಮುಂದೆ ದರ್ಶನೋಪಾಯಲ್ಲಿ ನಮ್ಮ ಕಣ್ಣಮುಂದೆ ಸಾಗಿ, ನಾವು ಆ ಪಾತ್ರಗಳಲ್ಲಿ ಒಮ್ಮೆ ಹಾಯ್ದು ಬರಬಹುದೇನೋ, ಎನ್ನುವಷ್ಟು ನಮ್ಮನ್ನು ಆವರಿಸಿ ಬಿಡುತ್ತವೆ.

ದರ್ಶನದಲ್ಲಿ ಸ್ತ್ರೀ ಪುರುಷ ಸ್ಪರ್ಧಿಯಿಲ್ಲ. ಬದಲಿಗೆ ಸ್ತ್ರೀ ತನ್ನದೇ ಅಸ್ತಿತ್ವದಲ್ಲಿ ಪ್ರಭಾವ ಬೀರುತ್ತಾ. ಕುವೆಂಪುರವರ ಸಾಹಿತ್ಯಕಾಲ ನವೋದಯ. ಅಲ್ಲಿನ ಕಾಲಕ್ಕೆ ಪಾತಿವ್ರತ್ಯವೂ ಒಂದು ಮೌಲ್ಯ: ಅದು ಸ್ತ್ರೀಯರಿಗಷ್ಟೇ ಅಲ್ಲ, ಪುರುಷರಿಗೂ ಅಗತ್ಯ ಎಂಬುದನ್ನು ರಾಮನ ಮೂಲಕ ತೋರಿಸಿ ಕೊಟ್ಟಿದ್ದಾರೆ. ಹೌದು, ಇನ್ನೇನು ದಿನದ ಅವನ ನೆನಪಿನ ಕ್ಷಣಗಳು ನನಸಾಗಿ, ನಿಂತಿದೆ, ಎಂಬುದನ್ನು ನೆನದರೆ ನಿಜವಾಗಿಯೂ ಅವಳು ರೋಮಾಂಚಿತಳಾಗಿದ್ದಳು, ಸೀತೆ. ಆದರೆ ಅದೇ ಪ್ರೀತಿಯಿಂದ ರಾಮನು ಅವಳನ್ನು ಆದರಿಸಲೇ, ಇಲ. ಬದಲಿಗೆ ಅವಳನ್ನೇ ಪರೀಕ್ಷಿಸ ಹೊರಟ. ಇದರಿಗಿಂತವರಿತ ಅವಳು ಅಗ್ನಿಪರೀಕ್ಷೆಗಾಗಿ ಅಗ್ನಿಯಲ್ಲಿಯೇ ಶುದ್ಧವಾಗಬಯಸಿದಳು. ಅದಕ್ಕಾಗಿ ಅಗ್ನಿ ದೇವನಿಗೇ ಶರಣು ನಡೆದಳು. ಅಂದರೆ ಧಗಿ ಧಗಿಸುವ ಅಗ್ನಿಯನ್ನು ಪ್ರವೇಶಿಸಿದಳು. ಇದಕ್ಕೆಲ್ಲ ಕಾರಣೀಭೂತವಾಗಿ, ಮೂಕಸಾಕ್ಷಿಯಾಗಿ ನಿಂತಿದ್ದ ರಾಮನು ಎಲ್ಲರೂ ನೋಡ ನೋಡುವಷ್ಟರಲ್ಲಿಯೇ ತಾನೂ ಅಗ್ನಿ ಪ್ರವೇಶಿಸಿದನು. ಅಷ್ಟರಲ್ಲಿ ಆ ಚಿತಾಗ್ನಿ ನವರತ್ನ ಕಾಂತಿಯನ್ನು ಪಡೆಯಿತು. ಅಷ್ಟೇ ಅಲ, ಅಗ್ನಿಜ್ವಾಲೆ ಇಬ್ಬಾಗವಾಗಿ ಶ್ರೀರಾಮ ಸೀತೆಯೊಡನೆ ದಿವ್ಯತೇಜಸ್ಸಿನಿಂದ ಶೋಭಿತನಾಗಿ ಹೊರಬಂದನು. ಇದನ್ನು ನೋಡಿದ ಎಲ್ಲರೂ  ಹರುಷಿತರಾದರು. ಆಗ ಪ್ರೀತಿಪಾತ್ರಳಾದ ಅನಲೆ ಹೇಳುವ ಮಾತು, ಕುವೆಂಪುರವರ ಸ್ತ್ರೀ-ಸಮಾನತೆಯನ್ನು  ಅವರು ಗೌರವಿಸುವ ರೀತಿಯನ್ನು ಎತ್ತಿ ತೋರಿಸುವದು. ಅದನ್ನೇ ಸ್ತ್ರೀ-ಸಮುದಾಯದ ಧ್ವನಿಯಾಗಿ ಅನಲೆ ಈ ರೀತಿ ಹೇಳುತ್ತಾಳೆ. ’ಪೂಜ್ಯೆಯಂ ಪಾಲಿಸುವ ನೆವದಿ ನೀನುಂ ಪರೀಕ್ಷೆತನಲಾ ! ಲೋಕತೈವಿಗೆ ಲೋಕಮರ್‍ಯಾದೆಗೊಳಗಾದ.’

Image result for kuvempu

ಅಂದರೆ “ಪತಿವ್ರತೆಯನ್ನು ಅಗ್ನಿ ಪರೀಕ್ಷೆ ಮಾಡಿದ ಪುರುಷನನ್ನು ಪರೀಕ್ಷಿಸುವವರಾರು ? ಅವನೇನು ದುರಿತದೂರನೇ ? ಎಂದು ಶಂಕಿಸಿದೆ. ಆದರೆ ನೀನು ಪೂಜ್ಯೆಯನ್ನು ಪರೀಕ್ಷಿಸುವ ನೆವದಿಂದ  ನಿನ್ನನ್ನು ಪರೀಕ್ಷಿಸಿಕೊಂಡೆ ದೇವ,ನನ್ನ ಮಾತನ್ನು ಮನ್ನಿಸು.” ಎಂದು
ಇದು ಕುವೆಂಪುರವರು ಸ್ತ್ರೀ-ಪುರುಷ ಸಮಾನತೆಯ ಕಲ್ಪನೆಯಲ್ಲಿ ಚಿತ್ರಿಸಿದ ವಿಶಿಷ್ಟ ರೂಪಕ. ಏಕೆಂದರೆ ಬಹುತೇಕ ರಾಮಾಯಣಗಳಲ್ಲಿ ಸರ್ವಾಲಂಕೃತ ಸೀತೆ ಅಗ್ನಿ ಸೇರಿದಾಗ, ಅವಳಿಷ್ಟು ದಣಿಯದೆ, ಅಂದರೆ ಅವಳು ಮುಡಿದ ಹೂ-ಸಮೇತ ಅಗ್ನಿದೇವ ಅವಳನ್ನು ಮರಳಿಸುತ್ತಾ. ಆದರೆ ಇಲ್ಲಿ ಕುವೆಂಪು ದರ್ಶನದಲ್ಲಿ ಹೊಸದೊಂದು ಹೊಳಹಿನೊಡನೆ, ಓದುಗರಿಗೆ ಅದರಲ್ಲೂ ಸ್ತ್ರೀ ಓದುಗರಿಗೆ ಅಲ್ಲಿಯವರೆಗೆ ರಾಮಾಯಣದ ಈ ಪ್ರಸಂಗಕ್ಕೆ ಹಾಂ! ಈ ರೀತಿಯೂ ಇರಬಹುದು ಎಂಬುದನ್ನು ಹೊಳೆಯಿಸುತ್ತದೆ. ಅಂದರೆ ಪಾತಿವ್ರತ್ಯದಿಂದ “ಸ್ತ್ರೀ” ಶ್ರೀಮತಿಯಾದ, ಸತೀವ್ರತ್ಯದಿಂದ ಪುರುಷ “ಶ್ರೀ” ಪತಿಯಾಗಬೇಕೆಂಬ, ಆಶಯ ವ್ಯಕ್ತ-ಪಡಿಸುತ್ತಾರೆ. ದಾಂಪತ್ಯ ಗೀತೆಯಲ್ಲಿ, ಅರ್ಧನಾರೀಶ್ವರದ ಹೊಸ ಭಾಷ್ಯಯನ್ನೇ ಬರೆದಿದ್ದಾರೆ, ದರ್ಶನದಲಿ. ಪ್ರೇಮ ಏಕವ್ಯಕ್ತಿಯಾಗಿರದೇ ಹೆಣ್ಣು-ಗಂಡಿನಲ್ಲಿ ಸಮದ್ಧಿಭಾವದ ವ್ರತನಿಷ್ಠಯಾಗಿ ಮೇಳೈಸಿದೆ.
ರಾಮ-ಸೀತಾ, ಲಕ್ಷ್ಮಣ-ಊರ್ಮಿಳೆ, ವಾಲಿ-ತಾರಾ, ಇಂದ್ರಜಿತ್ತು-ತಾರಾಕ, ಇವರ ಮೂಲಕ ಅಷ್ಟೇ ಅಲ್ಲ ಯಾವುದೋ ಕ್ಷಣದಲ್ಲಿ ಸೀತೆಯನ್ನು ಬಯಸಿ, ಅಪಹರಿಸಿದ ರಾವಣನೂ ಕೂಡಾ ಮಂಡೋದರಿಯ ಪ್ರೀತಿಯನ್ನು ಧಿಕ್ಕಿರಿಸಲಾರ. ಅವನಿಗೆ ಅವಳ ಪ್ರೀತಿಯ ಸಾಂತ್ವನ ಬೇಕು.
ಹೌದು ’ರಾಮಾಯಣ ದರ್ಶನಂ’ ನಲ್ಲಿ ಬರುವ ಪಾತ್ರಗಳು ಅನನ್ಯ. ಇಲ್ಲಿನ ವ್ಯಕ್ತಿ ಚಿತ್ರಗಳು ಅರಿತೋ-ಅರಿಯದೋ ಮಾಡಿದ ತಪ್ಪಿಗೆ, ಕೊನೆಗೆ ಪ್ರಾಶಶ್ಚಿತ್ತ ಬೇಗುದಿಯಲ್ಲಿ ಕರಗಿ, ಪಾಪಿಯಾದವನು ಉದ್ಧಾರವಾಗುವದು ಅಸಂಭವವಲ್ಲ:ಬದಲಿಗೆ ಸಾಧ್ಯ. ಎಂಬುದನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಏಕೆಂದರೆ ದರ್ಶನದ ಪರಮೋನ್ನತ ಸಂದೇಶಗಳನೇಕ ಅದರಲ್ಲಿ ಪ್ರಮುಖವಾದುದು ’ಪಾಪಿಗುದ್ದಾರಮಿ ಹುದೌ ಸೃಷ್ಟಿಯಮಹದ್‌ವ್ಯೂಹ ರಚನೆಯಲಿ’

Image result for kuvempu
ಇಲ್ಲಿನ ಸ್ತ್ರೀಯರೆಲ್ಲ ಪಾವನರು, ವಾಲ್ಮೀಕಿಯ ಮಂಥರೆ ಎಲ್ಲರಲ್ಲೂ ತಿರಸ್ಕಾರದಿಂದ ಇದ್ದರೆ, ಇಲ್ಲಿ ಮಂಥರಾಲಕ್ಷ್ಮಿಯಾಗಿ,  ಭರತ ಚಿತೆಯೇರುವಾಗ ರಾಮನ ಪುನರಾಗಮನ ಸುದ್ದಿ ತಿಳಿಸಿ ಪಾವನಳಾಗುಳುತ್ತಾಳೆ.
ಜನರೆಲ್ಲರ ಅಭಿಶಾಪಕ್ಕೆ ಗುರಿಯಾದ ಕೈಕೆಯೇ ತನ್ನ ನಿರಂತರ ಪಶ್ಚಾತ್ತಾಪದಿಂದ ಪುಣ್ಯ ಮೂರ್ತಿಯಾಗುತ್ತಾಳೆ. ಸೀತಾಪಹರಣದ ಮೂಲಕಾರಣವಾದ ಶೂರ್ಪನಖಿ, ಇಲ್ಲಿ ಚಂದ್ರನಖಿ. ಅವಳು ಪುಣ್ಯ ಮೂರ್ತಿ ಸೀತೆಯ ತಪಸ್ಸಿನ ಪ್ರಬರತೆಯಿಂದ ತನ್ನಲ್ಲಿ ಸು-ಸಂಸ್ಕೃಯ ಮೌಲ್ಯಗಳನ್ನು ತನ್ನಲ್ಲೇ ಮೇಳೈವಿಸಿ, ಪಾವನಗೊಂಡು ಉದ್ಧಾರವಾಗುತ್ತಾಳೆ.
ಆದಿ ರಾಮಾಯಣದಲ್ಲಿ ಕೇವಲ ಒಂದು ಚಿಕ್ಕಪಾತ್ರವಾಗಿದ್ದ ಊರ್ಮಿ, ಇಲ್ಲಿ ಲಕ್ಷ್ಮಣನ ಜೀವನೋದ್ಧಾರದ ತಪಃಶಕ್ತಿಯಾಗಿ ನಿಲ್ಲುತ್ತಾಳೆ. ಮಂಡೋದರಿಯ ಶುದ್ಧ ಭಕ್ತಿ & ನಿರ್ಮಲ ಮನಸ್ಸು, ಸರ್ವರಿಗೂ ಬಳಿತು ಬಯಸುವ ಮನಸ್ಸು ಧ್ಯಾನಮಾಲಿನಿಯ ಪಾಪಪ್ರಜ್ಞೆ & ಪಶ್ಚಾತ್ತಾಪ ಮನೋಭಾವ ಮತ್ತು ಸ್ತ್ರೀ ಸಮಾನತೆಯ ವಿಚಾರವುಳ್ಳ ಮುಶ್ದಿ-ಸತ್ಯಪ್ರೇಮದ & ನಿರ್ಮಲ ಮನಸ್ಸಿನ ಅನಲೆ ಎಲ್ಲೂ ಕಾವ್ಯದಲ್ಲಿ ಪುರುಷರ ಯಶಸ್ಸಿನ & ಅವರ ಸಮಾನ ಗೌರವಕ್ಕೆ ಅರ್ಹರಾಗಿ ನಿಲ್ಲುತ್ತಾರೆ.
ಈ ಕಾವ್ಯದ ಸಿದ್ಧಿಯ ಉದ್ಧಾರಕ ಶಕ್ತಿಯಾಗಿ ಸ್ತ್ರೀಯನ್ನು ಚಿತ್ರಿಸಿರುವದು ಕುವೆಂಪುರವರ ಸಮಾನತೆಯನ್ನು ವ್ಯಕ್ತಿ ಪಡಿಸುವದು & ’ಶ್ರೀರಾಮಾಯಣ ದರ್ಶನಂ’ ಈ ಯುಗದ ಮಹಾಕಾವ್ಯವಾಗಿ ’ಸ್ತ್ರಿ’ ಯ ಉದ್ಧಾರಕ ಶಕ್ತಿಯಾಗಿ ನಿಲ್ಲುತ್ತಾಳೆ ಇಂತಹ ಕಾವ್ಯಕ್ಕೆ ಕನ್ನಡದ ಪ್ರಥಮ ಜ್ಞಾನಪೀಠ ಬಂದು ೫೦ ವರ್ಷಗಳನ್ನು ಆಚರಿಸುವ ವೇಳೆ ಜೊತೆಗೆ ಕುವೆಂಪುರವರ 114ನೇ ಹುಟ್ಟುಹಬ್ಬವನ್ನು ಆಚರಿಸುವ ವೇಳೆ ಇದೋ ರಸ-ಋಷಿಗೆ ಒಂದು ನಮನ

Leave a Reply

Your email address will not be published.

Social Media Auto Publish Powered By : XYZScripts.com