ಕುವೆಂಪು 113 ನೇ ಜನ್ಮದಿನ : ರಸಋಷಿಗೆ ಗೂಗಲ್ ಡೂಡಲ್ ಗೌರವ

ರಾಷ್ಟ್ರಕವಿ ಕುವೆಂಪು ಅವರ 113ನೇ ಜನ್ಮದಿನದ ಅಂಗವಾಗಿ ಗೂಗಲ್ ಡೂಡಲ್ ಗೌರವ ನೀಡಿದೆ. ಕುವೆಂಪು ಡೂಡಲ್ ಚಿತ್ರದಲ್ಲಿ ಮಲೆನಾಡಿನ ಪೃಕೃತಿಯ ಮಡಿಲಿನಲ್ಲಿ ಬಂಡೆಯೊಂದರ ಮೇಲೆ ಕುಳಿತು ಬರೆಯುತ್ತಿರುವಂತೆ ತೋರಿಸಲಾಗಿದೆ. ಹಿಂಬದಿಯಲ್ಲಿ ಕನ್ನಡದಲ್ಲಿ ಗೂಗಲ್ ಎಂದು ಬರೆಯಲಾಗಿದೆ.

Image result for kuvempu

ಕುವೆಂಪು ( ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ) 1904 ರ ಡಿಸೆಂಬರ್ 29 ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯಲ್ಲಿ ಜನಿಸಿದರು. ರಾಮಾಯಾಣ ದರ್ಶನಂ ಮಹಾಕಾವ್ಯ, ಕಾದಂಬರಿಗಳಾದ ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡಿತಿ ಮುಂತಾದ ಶ್ರೇಷ್ಟ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದರು. ಕುವೆಂಪು ಜ್ಙಾನಪೀಠ ಪ್ರಶಸ್ತಿ ಪಡೆದ ಕನ್ನಡದ ಮೊದಲ ಕವಿ ಎನಿಸಿಕೊಂಡರು.

Related image

ರಕ್ತಾಕ್ಷಿ, ಬೆರಳ್ ಗೆ ಕೊರಳ್, ಶೂದ್ರ ತಪಸ್ವಿ ಮುಂತಾದ ನಾಟಕಗಳನ್ನು ರಚಿಸಿದ ಕುವೆಂಪು ರಾಜ್ಯ ಸಾಹಿತ್ಯ ಅಕಾಡಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಪದ್ಮವಿಭೂಷಣ, ಪಂಪ ಪ್ರಶಸ್ತಿಗಳನ್ನೂ ಪಡೆದಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com