WATCH : ಕಪಾಳಮೋಕ್ಷ ಮಾಡಿದ್ದಕ್ಕೆ ಕಾಂಗ್ರೆಸ್ ಶಾಸಕಿಯ ಕೆನ್ನೆಗೆ ಬಾರಿಸಿದ ಮಹಿಳಾ ಪೇದೆ

ಶಿಮ್ಲಾ : ಹಿಮಾಚಲ ಪ್ರದೇಶದ ಕಾಂಗ್ರೆಸ್‌ ಶಾಸಕಿ ಆಶಾ ಕುಮಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೇದೆಯೊಬ್ಬರ ಕಪಾಳಕ್ಕೆ ಬಾರಿಸಿದ್ದು ಇದರಿಂದ ಸಿಟ್ಟಿಗೆದ್ದ ಪೇದೆ ಶಾಸಕಿ ಎಂಬುದನ್ನೂ ಲೆಕ್ಕಿಸದೆ ಪುನಃ ಕಾಂಗ್ರೆಸ್‌ ಶಾಸಕಿಯ ಕೆನ್ನೆಗೆ ಬಾರಿಸಿದ್ದಾರೆ. ಈ ವಿಡಿಯೊ ಈಗ ಎಲ್ಲೆಡೆ ವೈರಲ್‌ ಆಗಿದೆ.

ಹಿಮಾಚಲ ಪ್ರದೇಶದಲ್ಲಿ ಶುಕ್ರವಾರ ರಾಹುಲ್‌ ಗಾಂಧಿ ಅಧ್ಯಕ್ಷತೆಯಲ್ಲಿ ಪಕ್ಷದ ಸಭೆ ನಡೆದಿತ್ತು. ಈ ಸಭೆಗೆ ಆಶಾಕುಮಾರಿ ಆಗಮಿಸಿದ್ದರು. ಆದರೆ ಸಭೆಯಲ್ಲಿ ಭಾಗವಹಿಸಲು ಪೊಲೀಸರು ತಡೆಒಡ್ಡಿದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಶಾಸಕಿ ಮಹಿಳಾ ಪೇದೆಯೊಬ್ಬರ ಕಪಾಳಕ್ಕೆ ಬಾರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪೇದೆ ಸಹ ಶಾಸಕಿಗೆ ಉಲ್ಟಾ ಬಾರಿಸಿದ್ದಾರೆ.

ಈ ಘಟನೆ ಕುರಿತು ಶಾಸಕಿ ಆಶಾ ಪ್ರತಿಕ್ರಿಯಿಸಿದ್ದು, ಮಹಿಳಾ ಪೊಲೀಸ್‌ ಪೇದೆ ನನ್ನನ್ನು ನಿಂದಿಸಿದ್ದಲ್ಲದೆ, ನನ್ನನ್ನು ತಳ್ಳಿದಳು. ನನಗೆ ಆಕೆಯ ತಾಯಿಯ ವಯಸ್ಸಾಗಿದೆ. ಆದರೆ ನಾನು ಆ ವೇಳೆ ಕೋಪವನ್ನು ನಿಯಂತ್ರಿಸಿಕೊಳ್ಳಬೇಕಿತ್ತು. ಘಟನೆ ಸಂಬಂಧ ನಾನು ಕ್ಷಮೆ ಕೇಳುವುದಾಗಿ ಹೇಳಿದ್ದಾರೆ.

ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಪರಾಮರ್ಶನಾ ಸಭೆ ನಡೆಸುತ್ತಿದ್ದು, ಈ ವೇಳೆ ನಡೆದ ಘಟನೆಗೆ ರಾಹುಲ್‌ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com