‘ಮಾರಿಬಿಡಿ’ – ನೋವ ಕನ್ನಡಿಯಲ್ಲಿ ಇಣುಕಿದ ಮುಖ : “ಸಖಿಗೀತ” – ಗೀತಾ ವಸಂತ್ ಅಂಕಣ

 

ಎಂಭತ್ತರದಶಕದಲ್ಲಿ ‘ಶಕುಂತಲೋಪಾಖ್ಯಾನ’ದ ಮೂಲಕ ಹೊಸದೇನೋ ಹೇಳುತ್ತಿರುವ ಭರವಸೆಯನ್ನು ಕನ್ನಡಕಾವ್ಯ  ಲೋಕದಲ್ಲಿ ಮೂಡಿಸಿದವರು ಎಂ.ಆರ್.ಕಮಲ. ಹೆಣ್ತನದಒಡಲ ದನಿಯನ್ನು ಶೋಧಿಸಿ, ಮೃದುವಾಗಿಆದರೆ ದಿಟ್ಟವಾಗಿ ಅಚ್ಚೊತ್ತುವಂತೆ ಮಾಡಿದ್ದು ಅವರ ಕಾವ್ಯದ ಹೆಗ್ಗಳಿಕೆ. ; ಜಾಣೆ ಮತ್ತು ಇತರ ಕವಿತೆಗಳು’ ಹಾಗೂ ‘ಹೂವು ಚೆಲ್ಲಿದ ಹಾದಿ’ ಅವರ ಇತರ ಕಾವ್ಯಸಂಗ್ರಹಗಳು. ಆಫ್ರಿಕನ್ ಮತ್ತು ಅರಬ್ ಮಹಿಳಾ ಕಾವ್ಯದಲ್ಲಿ ವಿಶೇಷ ಪರಿಣತಿದಿಂದ ತಮ್ಮ ಸಂವೇದನಾ ವಲಯವನ್ನು ವಿಸ್ತರಿಸಿಕೊಂಡಿದ್ದಾರೆ. ಇತ್ತೀಚೆಗೆ ಪ್ರಕಟವಾದ ಅವರ ‘ಮಾರಿಬಿಡಿ’ ಕವನ ಸಂಕಲನವು ವರ್ತಮಾನದ ತಲ್ಲಣಗಳನ್ನು ಪಕ್ವ ಸ್ತ್ರೀ ನೋಟವೊಂದರ ಮೂಲಕ ಅರಿಯುತ್ತ, ಪ್ರತಿಕ್ರಿಯಿಸುತ್ತ ನಡೆಯುವ ಪರಿಯಿಂದಾಗಿ ಮುಖ್ಯವೆನಿಸುತ್ತದೆ.
‘ಮಾರಿಬಿಡಿ’ ಎಂಬುದುಒಂದು ಹೇಳಿಕೆಯಾಗಿ, ಆಜ್ಞೆ, ಅಹವಾಲು, ನಿವೇದನೆ, ಸಂಕಟದ ಸುಯ್ಲುಏನೆಲ್ಲವೂ ಆಗಿ ಇಡೀ ಸಂಕಲನದಲ್ಲಿ ಬೇರೆ ಬೇರೆ ಸ್ತರದಲ್ಲಿಧ್ವನಿಸುತ್ತ ಹೋಗುತ್ತದೆ. ನಡುವಯಸ್ಕ ಹೆಣ್ಣುಜೀವವೊಂದು ಹಳೆಯ ಜೀವಪರ ಮೌಲ್ಯಗಳಿಗೆ ಹಂಬಲಿಸುತ್ತ, ಹೊಸದಕ್ಕೆ ಒಗ್ಗಿಕೊಳ್ಳಲು ಕಲಿಯುತ್ತ, ಬದುಕೆಂದರೆ ಚಲಿಸುತ್ತಿರುವುದು ಎಂಬ ವಾಸ್ತವದ ಎಚ್ಚರದಲ್ಲೂ ಒಮ್ಮೊಮ್ಮೆ ತಲ್ಲಣಿಸುತ್ತ ನಡೆಯುವ ಒಂದು ಯಾನದಂತೆ ಇಲ್ಲಿನ ಕವಿತೆಗಳಿವೆ. ಹಳಹಳಿಕೆಯಿಲ್ಲದ ಆತ್ಮನಿರೀಕ್ಷಣೆ ಹಾಗೂ ಭಾವಸಾಂದ್ರತೆ ಈ ಬರಹಗಳ ಶಕ್ತಿ. ಕಾವ್ಯದಲ್ಲಿ ಇಂಥಿಂಥದ್ದು ಇರಲೇಬೇಕು ಹಾಗೂ ಅದು ಘೋಷಣೆಯಂತೆ ಗಿವಿಗಡಚಿಕ್ಕಬೇಕೆಂಬ ಇಂದಿನ ಕಾವ್ಯದಕುರಿತ ನಿರೀಕ್ಷೆಗಳಿಗೆ ತಲೆಕೆಡಿಸಿಕೊಳ್ಳದೇ ತನ್ನ ಪಾಡಿಗೆತಾನು ಹರಿಯುವ ಹೊಳೆಯಂತೆ ಎಂ.ಆರ್.ಕಮಲಾರ ಕವಿತೆಗಳಿವೆ. ತನ್ನೊಳಗನ್ನೇ ಒಡ್ಡಿಕೊಂಡುತಾನೇ ನೇಯುವ ಗೂಡುಗಳಂತೆ ಇಲ್ಲಿನ ಕವಿತೆಗಳು ಕಾಣಿಸುತ್ತವೆ. ಆದ್ದರಿಂದಲೇ ಇಲ್ಲಿ ವಿಚಾರಗಳಿಗಿಂತ ತನ್ನನ್ನೇತಾನು ಉರಿಸಿ ಪಡೆದುಕೊಂಡ ಬೆಳಕಿಗೆ ಮಹತ್ವವಿದೆ.
ಎದೆಯೊಳಗೆ ನೋವಿನ ಗೂಡು ಹೆಣೆಯುವುದು
ಹರಣದುರಿ ಹೊತ್ತಿ ಬೆಂಕಿ ಬೆಳಕಾಗುವುದು.

Image result for ಮಾರಿಬಿಡಿ
(ಭಾವೋದ್ರೇಕದ ಕೊಂಬೆಗಳಲಿ ತೂಗುವುದೆಂದರೆ)
ಹೀಗೆ ತನ್ನನ್ನೇತಾನು ಕಂಡುಕೊಳ್ಳುವುದೆಂದರೆ ಅದೊಂದು ಒಂಟಿತನದ ಪಯಣ ಎಂಬ ಅರಿವು ಕವಯತ್ರಿಗಿದೆ. ಹಾಗಾಗಿಯೇ ‘ನಕ್ಷತ್ರಗಳೂ ಒಂಟಿ’ಎಂಬುದು ಅವರ ಕಾವ್ಯದಲ್ಲಿ ಪ್ರತಿಫಲಿಸುತ್ತದೆ. ಕೋಟ್ಯಾಂತರ ನಕ್ಷತ್ರಗಳು ಪಕ್ಕಪಕ್ಕದಲ್ಲೇ ಮಿನುಗುತ್ತಿರುವಂತೆ ತೋರುತ್ತದೆ. ಅದರವು ಬಿಗಿದಪ್ಪಿಕೊಳ್ಳುವಂತಿಲ್ಲ! ಒಬ್ಬರದಾರಿ ಇನ್ನೊಬ್ಬರು ತುಳಿಯುವಂತಿಲ್ಲ. ತಾವೇ ಉರಿಯದೆ ತಮಗೆ ಬೆಳಕಿಲ್ಲ! ಇದು ಸತ್ಯ. ಬದುಕನ್ನು ಬದುಕಿಯೇತೀರಿಸಬೇಕು. ಎಲ್ಲರ ನಡುವೆಯೂ, ಎಲ್ಲದರ ನಡುವೆಯೂಕಾಡುವಒಂಟಿತನವನ್ನುಕೂಡ ಅನುಭವಿಸಿಯೇ ಗೆಲ್ಲಬೇಕು ಆಗಲೇ ನಿಜದ ನೆಲೆ ಸಿಗುವುದು ಎಂಬಂತಹ ‘ದರ್ಶನ’ ಕಮಲಾರಕಾವ್ಯಕ್ಕಿದೆ.ಇದೇ ಭಾವಅವರ ‘ಉದುರಿಹೋಗುತ್ತದೆ’ ಎಂಬ ಕವಿತೆಯಲ್ಲೂಅನುರಣಿಸುತ್ತದೆ.ಅಂಟಿದ್ದೆಲ್ಲವೂಉದುರಿಹೋಗುತ್ತದೆ.ಹುಟ್ಟುವಾಗಇದ್ದ ಶುದ್ಧ ಬೆತ್ತಲು ಸ್ಥಿತಿ, ಮಗುನತಕ್ಕೆಏನೆಲ್ಲಾ ಆವರಣಗಳು ಅಂಟುತ್ತ ನಿಜರೂಪವೇ ಮರೆಯಾಗಿ ಹೋಗುವುದು ಬದುಕಿನ ವ್ಯಂಗ್ಯ.ಆದರೆ ಕಾಲ ಸನ್ನಿಹಿತವಾದಾಗಅಂಟಿದ್ದು ಕಳಚಿ ಬೀಳಲೇಬೇಕು.ಎಲೆಯುದುರುವಂತೆ!
ಉದುರುವುದೆಂದರೆ ಕಳೆದುಕೊಲ್ಳುವುದಲ್ಲ
ತಾನಾಗೇ ಉಳಿಯುವುದು!
ಇಂಥಗಹನವಾದ ಬಿಂಬಗಳು ಕಮಲಾರಕಾವ್ಯದುದ್ದಕ್ಕೂಎದುರಾಗುತ್ತವೆ. ಮತ್ತೆ ಮತ್ತೆಕಾಡುವಗುಣವನ್ನು ಉಳಿಯುತ್ತವೆ. ಇಲ್ಲೆಲ್ಲ ಕಾಣಿಸಿಗುವುದು ಒಂಟಿತನದ ಮಂದ್ರಛಾಯೆ.ಅಲ್ಲಿಯೇ ನಿಜವಾಗುವಧ್ಯಾನಸ್ಥ ಕ್ಷಣಗಳು.
‘ಮಾರಿಬಿಡಿ’ ಸಂಕಲನದ ಎಲ್ಲ ಕವಿತೆಗಳೂ ಹೀಗೆ ಧ್ಯಾನಸ್ಥವೇನಲ್ಲ. ಅವು ಈ ಲಾಭಕೋರ ವ್ಯವಹಾರಿಕ ಬದುಕಿನರೂಕ್ಷತೆಯ ಬಗ್ಗೆ.ಅದುತಂದಿಕ್ಕುವ ದಿಗ್ಭ್ರಾಂತಿಯ ಬಗ್ಗೆಯೂ ಮಾತನಾಡುತ್ತವೆ. ಬಳಸಿ ಹಳತಾದ ವಸ್ತುಗಳನ್ನು ಮಾರಿಬಿಡಿ..ಮುಲಾಜೇಕೆ?ಎಂಬ ಧ್ವನಿಯೇಅತ್ಯಂತಕ್ರೌರ್ಯದಿಂದಕೂಡಿದ್ದು.ಆದರೆಅದು ವರ್ತಮಾನದ ಕಿವಿಗೆ ಸಹಜವಾಗಿ ಕೇಳಿಸುವ ಸೊಲ್ಲು. ಹಳತೆಲ್ಲವನ್ನು ಮಾರಲು-ಕೊಳ್ಳಲು ಸಾಧ್ಯವೇ? ಎಂದು ಕಳಕಳಿಯಿಂದ ಪ್ರಶ್ನಿಸುವ ಕವಿತೆಗಳು ‘ಅದು ಸಾಧ್ಯ’ ಎಂದುಲಿವ ಬಲಾಢ್ಯ ವ್ಯವಸ್ಥೆಯೆದರುತಮ್ಮ ದಿಗ್ಭ್ರಾಂತಿಯನ್ನು ಪ್ರಕಟಿಸುತ್ತವೆ. ವಸ್ತು ಪ್ರಪಂಚ ಹಾಗೂ ಅದನ್ನುತಬ್ಬಿಕೊಂಡಿರುವ ಭಾವಪ್ರಪಂಚಎರಡೂ ಬಿಡಿಸಲಾಗದಏಕತೆಯನ್ನು ಉಸಿರಾಡುತ್ತವೆ. ಅದನ್ನು ಬೇರ್ಪಡಿಸಿದಾಗ ಕರುಳಲ್ಲಿ ಕತ್ತರಿಯಾಡಿಸಿದಂತಹ ನೋವೊಂದುಕದಲುತ್ತದೆ.
ಅಮ್ಮನಒಂದುಜೊತೆ ಬಂಗಾರದ ಬಳೆ
ಅವಳ ಬದುಕಿನಂತೆಯೇ ನವೆದು, ಸವೆದು
ಬಣ್ಣ ಕಳಕೊಂಡು ಕೊನೆಗೀಗ ಮುರಿದೇ ಹೋಗಿದೆ
‘ಮಾರಿಬಿಡಿ’… ಯಾರೋ ಟಿ.ವಿಯಲ್ಲಿಅರಚುತ್ತಿದ್ದಾರೆ. (ಹಾಗಾದರೆ ಮಾರಿಬಿಡಿ)
ಮುರಿದು ಬಳೆಯನ್ನು ಮಾರಬಹುದು.ಅದರೆ, ಆ ಬಳೆಯ ಜೊತೆಗೆ ಬೆಸೆದ ನೋವು, ನಲಿವು, ಸಂಭ್ರಮ, ದೈನಂದಿನದಅನುಭವ ಜಗತ್ತುಗಳನ್ನು ಮಾರಬಹುದೆ?ಮದುವೆಗೂ ಮಸಣಕ್ಕೂ ಸಾಕ್ಷಿಯಾದ ಕ್ಷಣಗಳನ್ನು ಮಾರಬಹುದೆ?ಎಂದುಕವಯತ್ರಿ ಪ್ರಶ್ನಿಸುತ್ತಾರೆ.ಈ ‘ಮಾರುವ’ ಮಾರಿ ವಸ್ತುಗಳಿಂದ ಹೆಣ್ಣುದೇಹವನ್ನೂ ಆವರಿಸಿ ಕಂಗೆಡಿಸಿದೆ. ಹೆಣ್ಣುದೇಹ ವಿಕ್ರಯಕ್ಕಿಟ್ಟ ಭೋಗವಸ್ತುವೆಂಬ ಚಿಂತನೆ ಬೆಳೆದು ಅತ್ಯಾಚಾರ, ಮಾನಭಂಗಗಳೆಂಬ ಪದಗಳನ್ನು ಎಳೆಗೂಸುಗಳೂ ಹೊಬೇಕಾಗಿ ಬಂದಿದೆ. ದೇಹ ಮಾರುವುದನ್ನು ‘ಕಾನೂನುಬದ್ಧ’ಗೊಳಿಸುವ ಚಿಂತನೆಗಳೂ ನಡೆಯುತ್ತಿವೆ!. ‘ಪತಿಗಳೆನ್ನನು ಮಾರಿ ಧರ್ಮಸ್ಥಿತಿಯನ್ನು ಕೈಗೊಂಡರು’ ಎಂದು ವಿಷಾದಪಡುವದ್ರೌಪದಿ, ಹರಾಜುಕಟ್ಟಿಯಲ್ಲಿ ನಿಂತ ಚಂದ್ರಮತಿ!.ಒಂದೇ, ಎರಡೇ… ಹೀಗೆ ಮಾರಿ ಹೋಗಿÀ ಚೂರುಚೂರಾಗಿ ಮುರಿದು ಬಿದ್ದ ಹೆಣ್ತನದ ನೋವನ್ನುದರ್ಶನಮಾಡಿಸುತ್ತಲೇ ನೀವು ಅವಳ ತಾಯ್ತನವನ್ನು , ಹೆಣ್ತನದಘನತೆಯನ್ನು ಮಾರಲಾಗದು ಎಂಬ ಧನಾತ್ಮಕಚಿಂತನೆಯಲ್ಲಿಕವಿತೆಕೊನೆಯಾಗುತ್ತದೆ.ಒಳಗಿನ ಚೈತನ್ಯವನ್ನು ಫಾಸಿಯಾಗದಂತೆ ಕಾಪಿಟ್ಟುಕೊಂಡ ಹೆಣ್ಣು ಲೋಕದ ಸ್ವಯಂಪ್ರಭೆಯರನ್ನು ಕಮಲಾ ಕಾವ್ಯದಲ್ಲಿ ಜೀವಂತಗೊಳಿಸಿರುವುದು ಹೀಗೆ.
ಈ ಮಾರುವಧಾವಂತದಲ್ಲಿ ಪರದೇಸಿತನದ ನೋವೊಂದು ಮರೆಯಲ್ಲಿಕಾಡುತ್ತಲೇ ಹೋಗುತ್ತದೆ.‘ಮುಖವಾಡಗಳ ಮಾರುವಊರಿನಲ್ಲೊಂದು ಸುತ್ತು’ ಕವಿತೆಕೂಡಇದೇ ನೋವಿನ ಆವರ್ತನವೇಆಗಿದೆ.ಇಲ್ಲಿ ಮುಖವಾಡಗಳನ್ನು ಧರಿಸಬೆಕಿಲ್ಲ. ಅವು ಚsÀರ್ಮವೇಆಗಿಬಿಟ್ಟಿವೆ.ಇದು ವ್ಯಾಪಾರೀಜಗತ್ತು.ಅದಕ್ಕೆತಾಯಿಭಾಷೆಯೇ ಬೇಕಾಗಿಲ್ಲ! ಇಟಾಲಿಯನ್, ಫ್ರೆಂಚ್, ಜರ್ಮನ್, ಕನ್ನಡ, ತಮಿಳು ಯಾವುದಾದರೂ ನಡೆದೀತುಅದಕ್ಕೆ!ವ್ಯಾಪಾರವಾಗುವುದು ಮಾತ್ರಇಲ್ಲಿ ಮುಖ್ಯ.ತಾಯ್ತನ ಸೋಲುತ್ತಿದೆಯೇ ಎಂಬ ಸಣ್ಣದುಗುಡವನ್ನುಕವಿತೆ ವ್ಯಕ್ತಪಡಿಸುತ್ತದೆ.
‘ಮಾರಿಬಿಡಿ’ ಸಂಕಲನದ ಕವಿತೆಗಳು ಒಂದುಅವ್ಯಕ್ತಅನಾಥಪ್ರಜ್ಞೆಯೊಂದಕ್ಕೆಕನ್ನಡಿ ಹಿಡಿಯುತ್ತದೆ.ಈ ತಬ್ಬಲಿತನವನ್ನುತನ್ನತೆಕ್ಕೆಯಲ್ಲಿಟ್ಟು ಸಂತೈಸಬೇಕೆಂಬ ತಾಯ್ತನವೂಇಲ್ಲಿಒಟ್ಟೊಟ್ಟಿಗೆ ಮುಖಾಮುಖಿಯಾಗುತ್ತದೆ.ಆ ಮೂಲಕ ಅದು ತನ್ನೊಳಗಿನ ಖಾಲಿತನವನ್ನೇ ತುಂಬಿಕೊಳ್ಳಲು ಚಡಪಡಿಸುವಂತಿದೆ.ತಾಯಿಯ ಈ ತಬ್ಬಲಿತನ ನಾಗರೀಕತೆಯು ಶೂನ್ಯವಾಗಿದೆ, ಶುಷ್ಕವಾಗಿದೆಎಂಬುದನ್ನೇ ಪರೋಕ್ಷವಾಗಿ ಹೇಳುತ್ತಿದೆ. ‘ಮೌನೇಶರೊಂದಿಗೆ ವಾಕಿಂಗ್’ ಹಾಗೂ ‘ಸರದಿ ಸಾಲಿನಲ್ಲಿ’ ಎಂಬ ಕವಿತೆಗಳಲ್ಲಿ ಹೊಸಪೀಳಿಗೆಯ ಶುಷ್ಕತೆಯನ್ನು ಸೂಚ್ಯವಾಗಿಕವಯತ್ರಿಕಾಣಿಸುತ್ತಾರೆ.ಇಪ್ಪತ್ತರ ಹುಡುಗನಿಗೆ ಕೀಲಿಮಣಿಯೇ ಪ್ರಪಂಚ.ಪ್ರೀತಿ, ಮುನಿಸು, ಜಗಳ ಎಲ್ಲವೂಅದೇಅದೃಶ್ಯಜಗತ್ತಿನಲ್ಲಿಯೇ.ರೂಪ, ರಸ, ಗಂಧಗಳ ಜಗತ್ತೇಅವನಲ್ಲಿಗೈರುಹಾಜರಾಗಿದೆ. ಯಾರದೋ ಕಣ್ಣುಗಳಲ್ಲಿ ಪ್ರೀತಿ ಹುಡುಕುವಅಮ್ಮಂದಿರಕಣ್ಣು ಇವನಿಗೆ ಸ್ಪಂದಿಸಲು ಅವಕಾಶವೇ ಇಲ್ಲ. ಏಕೆಂದರೆಈತಕೀಲುಮಣಿಯಲ್ಲೇ ಸದಾಕಣ್ಣು ಕೀಲಿಸಿರುವನು.ಆಗ ಸಹಜವಾಗಿ ಹಿರಿಯರೂ ‘ಗುಡ್‍ಮಾರ್ನಿಂಗ್’ ಸಂದೇಶಗಳನ್ನೊತ್ತಿ ಈ ಭ್ರಮಾಜಗತ್ತಿಗೆ ಸರಿಯುವ ವ್ಯಂಗ್ಯ ಈ ಕವಿತೆಯಲ್ಲಿ ಪರಿಣಾಮಕಾರಿಯಾಗಿದೆ. ‘ಮುಖಪುಸ್ತಕವೆಂಬ ಮಾರುಕಟ್ಟೆ’ ಎಂಬ ಕವಿತೆಕೂಡ ಫೇಸ್‍ಬುಕ್ ಲೋಕದಕೃತಕ ಮೌಲ್ಯಗಳನ್ನು ಮೆಲ್ಲಗೆಛೇಡಿಸುತ್ತದೆ.ಇಲ್ಲಿ ನಮ್ಮಅಸಲಿಯತ್ತು ನಿಲ್ಲುವುದಿಲ್ಲ. ಏನಿದ್ದರೂಇಲ್ಲಿ ಲೇಬಲ್ಲುಗಳದ್ದೇ ಕಾರುಬಾರು.ಇಲ್ಲಿ ನಮ್ಮಚಹರೆ ಮರೆತು ‘ಗುಂಪು ಮರಗಳ ತಂಪಿನಲ್ಲೇ’ ಬರಬೇಕು.ಈ ಮುಖಹೀನ ‘ಮುಖಪುಸ್ತಕವೆಂಬ’ ಲೋಕದಗುಂಪುಗಾರಿಕೆ, ಗುರುತಿನ ಹುಚ್ಚು, ಅದಕ್ಕಾಗಿ ನಡೆಸುವಕ್ಷುದ್ರ ರಾಜಕಾರಣಗಳು ಆಧುನಿಕ ವಾಸ್ತವಗಳೇ ಆಗಿವೆ. ಗಮನ ಸೆಳೆಯುವುದೇ ಮುಖ್ಯವಾದಾಗ ಒಳದನಿ ಮುಚ್ಚಿಹೋÀಗುತ್ತದೆ.ಧಿಮಿಧಿüಮಿಕಣಿಯುವುದೇ ನರ್ತನವೆನಿಸಿಕೊಂಡು ಬಿಡುತ್ತದೆ!ಕಾಯುವ, ಧ್ವನಿಸುವ,ಧ್ಯಾನಿಸುವ, ïಧರಿಸುವ ಕ್ಷಣಗಳೆಲ್ಲ ಮರೆಯಾಗಿ ‘ಸೂಪರ್ ಮಿನಿಟ್’ ಎಂಬ ತತ್ಪದಡಿ ದಿಢೀರ್ ಆಗಿ ಕಡತಂದ ಸಾಲುಗಳು ಕವಿತೆಯಾಗಿಬಿಡುತ್ತದೆ!.
ಹೀಗೆ ಸಮಕಾಲೀನ ಕವಿತೆಗಳ ಬಗೆಗೂ ‘ಮಾರಿಬಿಡಿ’ ತತ್ವಅನ್ವಯವಾಗುವುದನ್ನುಎಂ.ಆರ್.ಕಮಲಾ ಗಮನಿಸುತ್ತಾರೆ. ಕಲಸಿಹೋದ ಆಧುನಿಕತೆಯ ಭಾಷೆ, ದೇಶಾವರಿ ನಗೆ, ಮಂಕುಬೂದಿಯೆರಚುವ ತೆಳು ಮಾತುಗಳು, ಮೂಲ ವಿಗ್ರಹವನ್ನೇ ಮರೆತುಉದ್ಭವ ಮೂರ್ತಿಯಂತಾದ ಬದುಕು, ಮೇಲಿಂದ ‘ಫೀಲಿಂಗ್ ಹ್ಯಾಪ್ಪಿ!, ‘ಫೀಲಿಂಗ್‍ಅಸಮ್’ ಎಂದುಕೃತಕ ಉಲಿ!. ಇಂಥಜಗತ್ತಿನ ನಡುವೆತಾಯ್ತನವನ್ನು ಹುಡುಕುವಅರ್ತತೆ, ಅರ್ದೃತೆಗೆಧ್ವನಿಕೊಡಲು ‘ಮಾರಿಬಿಡಿ’ಯ ಕವಿತೆಗಳು ಹಂಬಲಿಸುತ್ತವೆ. ಅವು ಮಥುರೆಯ ಬೃಂದಾವನದ ಬರಿಗೊರಳ ರಾಧೆಯರಒಂಟಿತನದ ಸುಯ್ಲನ್ನು ಕೇಳಿಸಿಕೊಳ್ಳುತ್ತವೆ, ಸಿದ್ಧರಗುಡ್ಡದ ಸೆಳೆತಕ್ಕೆ ಸಿಕ್ಕಿ ಜಾಲಾರಿ ಹೂಗಳ ಪರಿಮಳದಲ್ಲಿ ಮೈಮರೆಯುತ್ತವೆ, ಅಮ್ಮನ ನೋವಿನ ಮುಖದ ಹಿಂದಿರುವ ಬದುಕಿನ ಮೈದಡವುತ್ತವೆ. ಸರದಿ ಸಾಲಿನಲ್ಲಿನಿಂತ ಖಾಲಿ ಕಣ್ಣಿನಒಂಟಿ ಮುದುಕರನ್ನುಕಂಡುಕನಲುತ್ತವೆ… ಮತ್ತುಅಂತಹ ಸರತಿ ಸಾಲಿನಲ್ಲಿತಾನೂಇರಬಹುದೆಂದು ನೆನೆದು ವಿಹ್ಪಲಗೊಳ್ಳುತ್ತವೆ. ಕವಿತೆ ಕೇಳಿಸಿಕೊಳ್ಳಬೇಕಾದದ್ದೇ ಇಂಥ ಕೇಳದ ಸ್ವರಗಳನ್ನು.ಅದುಆಕಾರಕೊಡಬೇಕಾದದ್ದೇಇಂಥಆಕಾರವಿಹೀನ ನೋವುಗಳಿಗೆ.ಇಂಥ ನೋವಿನಲ್ಲಿಯೇ ನಿಜಮುಖದದರ್ಶನವಾಗುವುದು.
‘ನೋವು’ ಯಾರೋಕೂಗಿದರು
ಹೆಣ್ಣುಮಕ್ಕಳೆಲ್ಲ ದಬದಬನೆ
ಹೊರಗೋಡಿ ಸಿಕ್ಕ ಸಿಕ್ಕವರ
ಕಣ್ಣಲ್ಲೆಲ್ಲ ಮುಖ ನೋಡಿಕೊಂಡರು!(ನೋವು)

ಡಾ. ಗೀತಾ ವಸಂತ

Leave a Reply

Your email address will not be published.

Social Media Auto Publish Powered By : XYZScripts.com