Ranaji Final : ಧ್ರುವ್ ಶೋರೆ ಶತಕ : ಉತ್ತಮ ಮೊತ್ತದತ್ತ ದೆಹಲಿ

ಇಂದೋರಿನ ಹೋಳ್ಕರ್ ಕ್ರೀಡಾಂಗಣದಲ್ಲಿ ದೆಹಲಿ ಹಾಗೂ ವಿದರ್ಭ ತಂಡಗಳ ನಡುವೆ 2017-18ನೇ ಸಾಲಿನ ರಣಜಿ ಟ್ರೋಫಿ ಫೈನಲ್ ಪಂದ್ಯ ಶುಕ್ರವಾರ ಆರಂಭಗೊಂಡಿದೆ. ಟಾಸ್ ಗೆದ್ದ ವಿದರ್ಭ ತಂಡ ಬೌಲಿಂಗ್ ಆಯ್ದುಕೊಂಡಿತು.

ಬ್ಯಾಟ್ ಮಾಡಲಿಳಿದ ದೆಹಲಿ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟಕ್ಕೆ  ರನ್ ಸೇರಿಸಿದೆ. ಆರಂಭಿಕ ಬ್ಯಾಟ್ಸಮನ್ ಗಳನ್ನು ಬೇಗನೆ ಕಳೆದುಕೊಂಡ ದೆಹಲಿ ಸಂಕಷ್ಟಕ್ಕೆ ಸಿಲುಕಿತ್ತು. ತಾಳ್ಮೆಯ ಬ್ಯಾಟಿಂಗ್ ನಡೆಸಿ ಶತಕ ಬಾರಿಸಿದ ಮೂರನೇ ಕ್ರಮಾಂಕದ ಬ್ಯಾಟ್ಸಮನ್ ಧ್ರುವ್ ಶೋರೆ 123 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ.

ಶೋರೆಗೆ ಉತ್ತಮ ಸಾಥ್ ನೀಡಿದ ಹಿಮ್ಮತ್ ಸಿಂಗ್ 66 ರನ್ ಗಳಿಸಿದರು. ವಿದರ್ಭ ಪರವಾಗಿ ಆದಿತ್ಯ ಠಾಕರೆ 2, ರಜನೀಶ್ ಗುರ್ಬಾನಿ 2, ಸಿದ್ದೇಶ್ ನೇರಲ್ 1, ಅಕ್ಷಯ್ ವಖಾರೆ 1 ವಿಕೆಟ್ ಪಡೆದರು.

Leave a Reply

Your email address will not be published.

Social Media Auto Publish Powered By : XYZScripts.com