ಸೌಹಾರ್ದ ಮಂಟಪ ಕಾರ್ಯಕ್ರಮ : BJP ವಿರುದ್ದ ರಣಕಹಳೆ ಊದಿದ ಜಿಗ್ನೇಶ್‌ ಮೇವಾನಿ

ಚಿಕ್ಕಮಗಳೂರು: ಕೋಮುಸೌಹಾರ್ದ ವೇದಿಕೆ 15ನೇ ವರ್ಷ ವರ್ಷದ ಸೌಹಾರ್ದ ಮಂಟಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗುರುವಾರದಿಂದ ಈ ಕಾರ್ಯಕ್ರಮ ನಡೆಯುತ್ತಿದ್ದು, ಶುಕ್ರವಾರ ಕಾರ್ಯಕ್ರಮಕ್ಕೆ ದಲಿತ ಪರ ಹೋರಾಟಗಾರ ಜಿಗ್ನೇಶ್‌ ಮೇವಾನಿ ಆಗಮಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಜಿಗ್ನೇಶ್‌ ಮೇವಾನಿ, ನನ್ನ ಹೋರಾಟ ಯಾವಾಗಲೂ ಬಿಜೆಪಿ ವಿರುದ್ದ ವಾಗಿರುತ್ತದೆ. ಮುಂದಿನ ಕರ್ನಾಟಕ ಚುನಾವಣೆಗಳಲ್ಲಿ ಬಿಜೆಪಿ ವಿರುದ್ದ ಹೋರಾಟ ಮುಂದುವರೆಸುತ್ತೇನೆ. ನಾನು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡಲ್ಲ. ನನ್ನ ಹೋರಾಟ ದಲಿತ, ಕೆಳಹಂತದ ಜನರ ಪರವಾಗಿರುತ್ತದೆ. ಕರ್ನಾಟಕದಲ್ಲಿ ನನಗೆ ಗೌರಿ ಲಂಕೇಶ್ ಸೇರಿದಂತೆ ಬಹಳಷ್ಟು ಹೋರಾಟಗಾರರ ಪರಿಚಯ ಇತ್ತು. ನಮ್ಮ ಹೋರಾಟ, ದಬ್ಬಾಳಿಕೆ ಹಾಗೂ ಕೋಮುವಾದ ಮಾಡುತ್ತಿರುವವರ ವಿರುದ್ದವಾಗಿರುತ್ತದೆ ಎಂದು ಬಿಜೆಪಿ ವಿರುದ್ದ ಚಿಕ್ಕಮಗಳೂರಿನಲ್ಲಿ ರಣಕಹಳೆ ಊದಿದ್ದಾರೆ.

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಸಂವಿಧಾನ ಬದಲಾವಣೆ ಹೇಳಿಕೆ ವಿಚಾರ ಕುರಿತಂತೆ ಪ್ರತಿಕ್ರಿಯಿಸಿರುವ ಜಿಗ್ನೇಶ್‌, ಸಂಘ ಪರಿವಾರದವರು ಬಿಜೆಪಿಯವರಿಗೆ ಮಧ್ಯವರ್ತಿ ರೀತಿ ಯಲ್ಲಿ ಕೋಮುವಾದ ಸೃಷ್ಟಿಸುವಲ್ಲಿ ಪಾತ್ರ ವಹಿಸುತ್ತಿದ್ದಾರೆ. ಬಿಜೆಪಿಯವರು ಇದೇ ಕೆಲಸದಲ್ಲಿ ತೊಡಗಿದ್ದಾರೆ. ಆದ್ರೆ ನಾವು ಕರ್ನಾಟಕದಲ್ಲಿ ಸಮಾನತೆ, ಸಹಬಾಳ್ವೆ ಗಾಗಿ ಹೋರಾಟ ಮಾಡ್ತೇವೆ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com