Chicago : ದರೋಡೆಕೋರರಿಂದ ಭಾರತೀಯ ಯುವಕನ ಮೇಲೆ ಶೂಟೌಟ್‌

ವಾಷಿಂಗ್ಟನ್‌ : ಅಮೆರಿಕದ ಶಿಕಾಗೋದಲ್ಲಿರುವ ಪೆಟ್ರೋಲ್ ಬಂಕ್‌ ಒಂದರ ಮೇಲೆ ದರೋಡೆಕೋರರು ದಾಳಿ ಮಾಡಿದ್ದು, ಈ ವೇಳೆ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಪ್ರಕರಣವನ್ನು ಭೇದಿಸಲು ನೆರವಾದವರಿಗೆ ಅಥವಾ ಅಪರಾಧಿಯನ್ನು ಹುಡುಕಿಕೊಟ್ಟವರಿಗೆ 12 ಸಾವಿರ ಡಾಲರ್‌ ಬಹುಮಾನ ನೀಡುವುದಾಗಿಯೂ ಅಮೆರಿಕ ಪೊಲೀಸರು ಘೋಷಿಸಿದ್ದಾರೆ.

ಮೃತ ವ್ಯಕ್ತಿಯನ್ನು ಅರ್ಷದ್‌ ವೋರಾ ಎಂದು ಗುರುತಿಸಲಾಗಿದೆ. ಈತ ಗುಜರಾತ್‌ ಮೂಲದವನಾಗಿದ್ದು, ಈತ ತನ್ನ ಕುಟುಂಬಕ್ಕೆ ಸೇರಿದ ಪೆಟ್ರೋಲ್‌ ಬಂಕ್‌ ಹಾಗೂ ಪಕ್ಕದಲ್ಲಿದ್ದ ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಈ ವೇಳೆ ಆಗಮಿಸಿದ ದರೋಡೆಕೋರರು ಆತನ ಮೇಲೆ ದಾಳಿ ಮಾಡಿರುವುದಾಗಿ ವರದಿಯಾಗಿದೆ. ಈ ವೇಳೆ ಮತ್ತೊಬ್ಬ ವ್ಯಕ್ತಿಯೂ ಮೃತಪಟ್ಟಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

Leave a Reply

Your email address will not be published.

Social Media Auto Publish Powered By : XYZScripts.com