ಮುಸ್ಲೀಮರಿಗಾದರೂ ವಿಧೇಯರಾಗಿರಿ, 5 ಬಾರಿ ನಮಾಜ್‌ ಮಾಡಿ : ರೈಗೆ ಜಗ್ಗೇಶ್‌ ಟಾಂಗ್‌

ಬೆಂಗಳೂರು : ಅರಣ್ಯ ಸಚಿವ ರಮಾನಾಥ ರೈ ಗುರುವಾರ ನಾನು ಆರು ಬಾರಿ ಶಾಸಕನಾಗಿರುವುದು ಅಲ್ಲಾಹು ಹಾಗೂ ಮುಸ್ಲೀಮರ ಮತಗಳಿಂದ ಎಂಬ ಹೇಳಿಕೆಗೆ ನಟ ಜಗ್ಗೇಶ್‌ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಜಗ್ಗೇಶ್‌ ಟ್ವೀಟ್ ಮಾಡಿದ್ದು, ದಯಮಾಡಿ ಈಗಲೇ ಮುಲ್ಲಾರನ್ನು ಕರೆಸಿ ಕತ್ನಾ ಮಾಡಿಸಿಕೊಳ್ಳಿ. ಇದರಿಂದಲಾದರೂ ಮುಸ್ಲೀಮರಿಗೆ ವಿಧೇಯರಾಗಿ ಐದು ಬಾರಿ ನಮಾಜ್ ಮಾಡಿ. ಯಾವುದೇ ಕಾರಣಕ್ಕೂ ಇನ್ಮುಂದೆ ಹಿಂದುಗಳ ಮತ ಕೇಳಬೇಡಿ. ಜೊತೆಗೆ ನಿಮ್ಮ ಹೆಸರನ್ನು ರಸತ್ತುಲ್ಲಾ ಎಂದು ಬದಲಿಸಿಕೊಳ್ಳಿ ಎಂದು ನೇರವಾಗಿ ಹೇಳಿದ್ದಾರೆ.

ಜಗ್ಗೇಶ್‌ ಅವರ ಈ ಟ್ವೀಟ್‌ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಪರ- ವಿರೋಧದ ಚರ್ಚೆ ಶುರುಮಾಡಿದ್ದಾರೆ.

ಗುರುವಾರ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಮಾನಾಥ ರೈ ನಾನು ಇಂದು ಆರು ಬಾರಿ ಬಂಟ್ವಾಳದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ ಎಂದರೆ, ಅದಕ್ಕೆ ಅಲ್ಲಾಹು ಹಾಗೂ ಮುಸ್ಲೀಮರ ಮತಗಳೇ ಕಾರಣ ಎಂದಿದ್ದರು. ಅಲ್ಲದೆ ನಾನು ಜಾತಿ ಆಧಾರದ ಮೇಲೆ ಚುನಾವಣೆಗೆ ನಿಂತಿದ್ದರೆ ಎಂದೋ ಮಾಜಿಯಾಗುತ್ತಿದ್ದೆ ಎಂದಿದ್ದರು.

2 thoughts on “ಮುಸ್ಲೀಮರಿಗಾದರೂ ವಿಧೇಯರಾಗಿರಿ, 5 ಬಾರಿ ನಮಾಜ್‌ ಮಾಡಿ : ರೈಗೆ ಜಗ್ಗೇಶ್‌ ಟಾಂಗ್‌

Leave a Reply

Your email address will not be published.

Social Media Auto Publish Powered By : XYZScripts.com