Android ಲೋಕದಲ್ಲಿ ಅಲ್ಲೋಲ ಕಲ್ಲೋಲ : “NOKIA”ದಿಂದ ಅತೀ ಕಡಿಮೆ ಬೆಲೆಗೆ ಫೋನ್‌

ಅದೆಷ್ಟೇ ಫೋನ್‌ಗಳು ಬಂದರು ಮೊದಲಿದ್ದ ನೋಕಿಯಾ ಫೋನ್‌ಗಳನ್ನು ಮರೆಯಲು ಮಾತ್ರ ಸಾಧ್ಯವಾಗುತ್ತಿಲ್ಲ. ಒಂದು ಕಾಲದಲ್ಲಿ ಇಡೀ ಜನಸಮುದಾಯದವರ ಮನೆಮಾತಾದ ನೋಕಿಯಾ ಬರುಬರುತ್ತಾ ಆ್ಯಂಡ್ರಾಯ್ಡ್‌ ಫೋನ್‌ಗಳಿಗೆ ಸ್ಪರ್ಧೆಯೊಡ್ಡಲಾಗದೆ ತೆರೆ ಮರೆಗೆ ಸರಿದಿತ್ತು.

ಆದರೆ ಇಂದಿನ ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗಿ ನೋಕಿಯಾ ಮತ್ತೆ ಎಂಟ್ರಿ ಕೊಡುತ್ತಿದ್ದು, ಆ್ಯಂಡ್ರಾಯ್ಡ್‌ ಮೊಬೈಲ್‌ಗಳ ತಯಾರಿಕೆ ಮಾಡಿದೆ. ಆದರೂ ಅದ್ಯಾಕೋ ಅಷ್ಟೊಂದು ಯಶಸ್ಸು ಸಿಕ್ಕಿಲ್ಲ. ಆದ್ದರಿಂದ ಆತೀ ಕಡಿಮೆ ಬೆಲೆಗೆ ಸ್ಮಾರ್ಟ್‌ ಫೋನ್‌ ಬಿಡುಗಡೆ ಮಾಡಲು ನಿರ್ಧರಿಸಿರುವ ನೋಕಿಯಾ ಚೈನಾ ಕಂಪನಿಗಳಿಗೆ ಸೆಡ್ಡು ಹೊಡೆಯಲು ನಿರ್ಧರಿಸಿದೆ.

ಹೊಸ ವರ್ಷದ ಮೊದಲ ತಿಂಗಳು ನೋಕಿಯಾ 1 ಆ್ಯಂಡ್ರಾಯ್ಡ್‌ ಒನ್‌ ಸ್ಮಾರ್ಟ್‌ ಫೋನನ್ನು ಬಿಡುಗಡೆ ಮಾಡುತ್ತಿದೆ. ಇದರ ಬೆಲೆ ಕೇವಲ 5 ಸಾವಿರ ಮಾತ್ರ. 5ಇಂಚು ಫುಲ್‌ ಎಚ್‌ಡಿ, ಐಪಿಎಸ್‌ ಡಿಸ್ ಪ್ಲೇ, ಉತ್ತಮ ಕ್ಯಾಮರಾ ಹೊಂದಿರುವುದಲ್ಲದೆ 1 ಜಿಬಿ ರ್ಯಾಮ್‌, 8 ಜಿಬಿ ಇಂಟರ್ನಲ್‌ ಮೆಮೋರಿ ಹೊಂದಿದೆ. ಅಲ್ಲದೆ ಬ್ಯಾಟರಿ ಬ್ಯಾಕ್‌ ಅಪ್ ಸಹ ಉತ್ತಮವಾಗಿರಲಿಗೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published.