ಶಿವಾಜಿ ಗಣೇಶನ್‌ ಹಾಗೂ MGR ಇಬ್ಬರೂ ಸೇರಿದರೆ ಒಬ್ಬ ರಾಜ್‌ ಕುಮಾರ್‌ಗೆ ಸಮ : ರಜಿನೀಕಾಂತ್‌

ಚೆನ್ನೈ : ತಮಿಳಿನ ಸೂಪರ್‌ಸ್ಟಾರ್‌ ರಜಿನೀಕಾಂತ್ ಅವರು ಡಾ.ರಾಜ್‌ ಕುಮಾರ್‌ ಅವರ ದೊಡ್ಡ ಅಭಿಮಾನಿ. ಅದನ್ನು ಈಗ ರಜಿನೀಕಾಂತ್ ಮತ್ತೆ ನೆನಪಿಸಿಕೊಂಡಿದ್ದು, ನನಗೆ ರಾಜ್‌ ಕುಮಾರ್‌ ಅವರೇ ಆದರ್ಶ ಎಂದಿದ್ದಾರೆ.

ಚೆನ್ನೈನಲ್ಲಿ ಅಭಿಮಾನಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರಿನೀಕಾಂತ್‌, ನನಗೆ ನಿಮ್ಮ ತವಕ ಅರ್ಥವಾಗುತ್ತದೆ. ನಾನು ಸಹ ನನ್ನ ಬಾಲ್ಯದ ದಿನಗಳಲ್ಲಿ ರಾಜ್‌ ಕುಮಾರ್‌ ಅವರನ್ನು ನೋಡಲು ಇದೇ ರೀತಿ ಹೋಗುತ್ತಿದ್ದೆ ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

ಇದೇ ವೇಳೆ ರಾಜ್ ಕುಮಾರ್‌ ಅವರ ನಡತೆಯನ್ನು ಹಾಡಿ ಹೊಗಳಿದ ರಜಿನೀಕಾಂತ್‌, ಮೊದಲ ಬಾರಿಗೆ ರಾಜ್‌ ಕುಮಾರ್‌ ಅವರನ್ನು ನೋಡಿದಾಗ ಮೈಮರೆತು ನಿಂತುಬಿಟ್ಟಿದ್ದೆ. ಬಳಿಕ ಅವರನ್ನು ಮುಟ್ಟಲು ಅವರ ಬಳಿ ಹೋಗಿದ್ದೆ. ಅದೇ ರೀತಿ ನಿಮ್ಮ ತವಕ ನನಗೆ ಅರ್ಥವಾಗುತ್ತದೆ ಎಂದಿದ್ದಾರೆ.

ಡಾ. ರಾಜ್‌ ಅವರದ್ದು ಮೇರು ವ್ಯಕ್ತಿತ್ವ. ಶಿವಾಜಿ ಗಣೇಶನ್‌ ಹಾಗೂ ಎಂಜಿಆರ್‌ ಇಬ್ಬರನ್ನು ಸೇರಿಸಿದರೆ ಒಬ್ಬ ರಾಜ್‌  ಕುಮಾರ್‌ಗೆ ಸಮ ಎಂದಿದ್ದಾರೆ. ಅಣ್ಣಾವ್ರ ಕಾಲು ಮುಟ್ಟಿ ನಮಸ್ಕರಿಸಲು ನನಗೆ ಅವಕಾಶ ಸಿಕ್ಕಿತ್ತು. ಅದೇ ನನ್ನ ಭಾಗ್ಯ ಎಂದಿದ್ದಾರೆ.

 

Leave a Reply

Your email address will not be published.