ಕಿಚ್ಚ ಸುದೀಪ್‌ಗೆ “ಕೈ” ಹಿಡಿಯುವಂತೆ ಕೇಳಿಕೊಂಡ್ರಾ ದಿವ್ಯಸ್ಪಂದನ….?

ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತುಗಳು ಮತ್ತೆ ಕೇಳಿಬರತೊಡಗಿವೆ. ಈ ಹಿಂದೆಯೇ ಕಿಚ್ಚ ನನಗೂ ರಾಜಕೀಯಕ್ಕೂ ಆಗಿ ಬರುವುದಿಲ್ಲ ಎಂದು ಖಡಕ್ಕಾಗಿ ಹೇಳಿದ್ದರೂ ಈಗ ಮತ್ತೆ ಅದೇ ಸುದ್ದಿ ಕೇಳಿಬರುತ್ತಿದೆ.

ಇತ್ತೀಚೆಗಷ್ಟೇ ನಟ ಸುದೀಪ್‌, ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿದ್ದು, ವಿಷ್ಣು ವರ್ಧನ್‌ ಸ್ಮಾರಕ ವಿಚಾರವಾಗಿ ಮಾತುಕತೆ ನಡೆಸಿದ್ದರು. ಇದಾದ ಬಳಿಕ ಜೆಡಿಎಸ್‌ ನಾಯಕ ಎಚ್‌ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈಗ ಕಾಂಗ್ರೆಸ್‌ನ ಮಾಜಿ ಸಂಸದೆ ರಮ್ಯಾ ಅವರು ಕಿಚ್ಚನ ಜೊತೆ ಮಾತುಕತೆ ನಡೆಸಿದ್ದಾರಂತೆ.

ಹೌದು ನಟಿ, ರಾಜಕಾರಣಿ ರಮ್ಯಾ ಸುದೀಪ್‌ ಅವರನ್ನು ಭೇಟಿ ಮಾಡಿ ರಾಜಕೀಯದ ಬಗ್ಗೆ ಮಾತುಕತೆ ನಡೆಸಿದ್ದಾರಂತೆ. ಆದ್ದರಿಂದ ತನ್ನ ಗೆಳತಿಯ ಮಾತು ಕೇಳಿ ಕಿಚ್ಚ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಾರಾ ಎಂಬ ಪ್ರಶ್ನೆ ಇನ್ನೂಕುತೂಹಲ ಹೆಚ್ಚು ಮಾಡಿದೆ.

ಒಂದು ವೇಳೆ ಸುದೀಪ್‌ ರಾಜಕೀಯಕ್ಕೆ ಎಂಟ್ರಿ ಕೊಡುವುದಾದರೆ ಮೊಳಕಾಲ್ಮುೂರು ಕ್ಷೇತ್ರದಿಂದ ಸ್ಪರ್ಧೆಗೆ ನಿಲ್ಲಿಸುವ ಬಗ್ಗೆ ಕಾಂಗ್ರೆಸ್‌ ನಾಯಕರು ಒಲವು ತೋರಿಸಿದ್ದಾರೆ. ಅಲ್ಲದೆ ಇದರ ಮುಂದಾಳತ್ವವನ್ನು ರಮ್ಯಾ ಅವರೇ ವಹಿಸಿಕೊಂಡಿದ್ದಾರೆ ಎನ್ನಲಾಗಿದೆ.

ಆದರೆ ಇಬ್ಬರು ಭೇಟಿ ಮಾಡಿದ್ದರ ಬಗ್ಗೆಯಾಗಲಿ ಅಥವಾ ರಾಜಕೀಯ ವಿಚಾರ ಮಾತಾಡಿದ್ದರ ಬಗ್ಗೆಯಾಗಲಿ ಇಬ್ಬರೂ ಯಾವುದೇ ಬಹಿರಂಗ ಹೇಳಿಕೆ ನೀಡಿಲ್ಲ.

Leave a Reply

Your email address will not be published.