ಸೀತೆ, ಲಕ್ಷ್ಣಣನಿಗೆ ಅಕ್ರಮ ಸಂಬಂಧವಿತ್ತು : ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಮಾಡಿದ ವಿದ್ಯಾರ್ಥಿ

ಮೈಸೂರು : ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಅವರನ್ನು ಬೈಯ್ಯುವ ಭರದಲ್ಲಿ ಹಿಂದೂ ದೇರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ವಿದ್ಯಾರ್ಥಿ ವಿರುದ್ದ ದೂರು ದಾಖಲಾಗಿದೆ.

ಹಾರೋಹಳ್ಳಿ ರವೀಂದ್ರ ಎಂಬಾತ ಹಿಂದೂ ದೇವರ ಬಗ್ಗೆ ಅಸಭ್ಯವಾಗಿ ಹೇಳಿಕೆ ನೀಡಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾನೆ. ಈತ ಮೈಸೂರು ವಿವಿಯಲ್ಲಿ ಪಿಎಚ್‌ಡಿ ಮಾಡುತ್ತಿರುವುದಾಗಿ ತಿಳಿದುಬಂದಿದೆ.

ಸೀತೆಗೂ ಲಕ್ಷ್ಮಣನಿಗೂ ಅಕ್ರಮ ಸಂಬಂಧವಿತ್ತು. ಸೀತೆ ತಾನಾಗಿಯೇ ರಾವಣನ ಬಳಿ ಸುಖಕ್ಕಾಗಿ ಹೋಗಿದ್ದಳು. ರಾವಣದ ಜೊತೆಗಿನ ಲೈಂಗಿಕ ಸಂಪರ್ಕದ ಬಳಿಕ ಲವ ಕುಶ ಹುಟ್ಟಿದ್ದು  ಎಂದು ಹೀಗೆ ಅವಹೇಳನಕಾರಿಯಾಗಿ ಬರಹ ಬರೆದಿದ್ದಾನೆ. ಇದರ ಜೊತೆಗೆ ಅನಂತ್ ಕುಮಾರ್‌ ಹಾಗೂ ಯೋಗಿ ವಿರುದ್ದವೂ ವಾಗ್ದಾಳಿ ನಡೆಸಿದ್ದಾನೆ.

ಈತನ ಈ ಪೋಸ್ಟ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದ್ದಲ್ಲದೆ, ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಜೊತೆಗೆ ಮೈಸೂರಿನ ಸಮಗ್ರ ರಕ್ಷಣಾ ವೇದಿಕೆ ವತಿಯಿಂದ ಡಿಸಿಪಿ ವಿಷ್ಣು ವರ್ಧನ ಅವರಿಗೆ ದೂರು ನೀಡಲಾಗಿದೆ.

Leave a Reply

Your email address will not be published.