ನಾನು 6 ಬಾರಿ ಶಾಸಕನಾಗಲು ಅಲ್ಲಾಹು ಹಾಗೂ ಮುಸ್ಲೀಮರ ಮತಗಳೇ ಕಾರಣ : ರಮಾನಾಥ ರೈ

ಮಂಗಳೂರು : ನಾನು ಅಲ್ಲಾಹುವಿನ ದಯೆ ಹಾಗೂ ಮುಸ್ಲಿಂ ಸಮುದಾಯದವರ ಕೃಪೆಯಿಂದ ನಾನು ಆರು ಬಾರಿ ಶಾಸಕನಾಗಿದ್ದು, ಅವರ ಋಣವನ್ನು ಏಳೇಳು ಜನ್ಮದಲ್ಲೂ ತೀರಿಸಲು ಸಾಧ್ಯವಿಲ್ಲ ಎಂದು ಸಚಿವ ರಮಾನಾಥ ರೈ ಹೇಳಿದ್ದಾರೆ.

ಈ ಹಿಂದೆ ರಮಾನಾಥ ರೈ ಮುಸ್ಲಿಂ ಸಮುದಾಯದವರನ್ನು ಓಲೈಸುವ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಈಗ ಅದಕ್ಕೆ ಪುಷ್ಠಿ ನೀಡುವಂತೆ ರಮಾನಾಥ ರೈ ನೇರವಾಗಿಯೇ ಮುಸ್ಲೀಮರಿಂದಲೇ ನಾನು ಗೆದ್ದುಬಂದಿದ್ದು ಅವರ ಋಣ ತೀರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಇಂದು ನಾನು ಅಲ್ಲಾನ  ದಯೆಯಿಂದ ಬಂಟ್ವಾಳದಲ್ಲಿ ಚುನಾವಣೆಗೆ ಸ್ಪರ್ಧಿಸಿ ಆರು ಬಾರಿ ಶಾಸಕನಾಗಿದ್ದೇನೆ. ಅದಕ್ಕೆ ಮುಸ್ಲೀಮರ ಜಾತ್ಯಾತೀತ ನಿಲುವು ಕಾರಣ. ನನ್ನ ಜಾತಿಯ ಮೇಲೆ ಯಾರಾದರು ಮತ ಹಾಕುವಂತಿದ್ದರೆ, ನಾನಿಂದು ಮಾಜಿ ಶಾಸಕನಾಗುತ್ತಿದೆ. ಜಾತಿಯಿಂದ ನನ್ನನ್ನು ನೋಡದೆ ಮತ ಹಾಕಿ ನನ್ನನ್ನು ಗೆಲ್ಲಿಸಿದ್ದೀರಿ ಎಂದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com