ಗೋವಾ ಬಿಸಿಲಿನ ಮಧ್ಯೆ ಜಾಲಿರೈಡ್‌ ಮೂಡ್‌ನಲ್ಲಿ ಸೋನಿಯಾ ಸೈಕಲ್‌ ಸವಾರಿ

ಪಣಜಿ : 19 ವರ್ಷಗಳ ಕಾಲ ಎಐಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಸೋನಿಯಾ ಗಾಂಧಿ ಇತ್ತೀಚೆಗಷ್ಟೇ ಎಲ್ಲಾ ಜವಾಬ್ದಾರಿಗಳನ್ನೂ ರಾಹುಲ್ ಗಾಂಧಿಗೆ ವಹಿಸಿ ಸದ್ಯ ನಿರಾಳರಾಗಿದ್ದಾರೆ.
ಹೆಚ್ಚಿನ ಜವಾಬ್ದಾರಿಗಳಿಂದ ಕೊಂಚ ರಿಲೀಫ್‌ ಆಗಿರುವ ಸೋನಿಯಾ ಗಾಂಧಿ ಈಗ ಜಾಲಿ ಮೂಡ್‌ನಲ್ಲಿದ್ದು, ಗೋವಾಕ್ಕೆ ಟ್ರಿಪ್‌ ಹೋಗಿದ್ದಾರೆ.
ಗೋವಾ ಸುತ್ತಮುತ್ತ  ಸೋನಿಯಾ ಸೈಕಲ್‌ಸವಾರಿ ಮಾಡುತ್ತಿರುವ ಫೋಟೋ ಪತ್ತೆಯಾಗಿದ್ದು ಅದನ್ನು ಬಾಲಿವುಡ್‌ ನಟ ರಿತೇಶ್‌ ದೇಶ್‌ ಮುಖ್‌ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಸೋಶಿಯಲ್‌ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

ಡಿಸೆಂಬರ್‌ 26ನೇ ತಾರೀಕಿನಂದು ಸೋನಿಯಾ ಕೊರೆಯುವ ಚಳಿಯ ವಾತಾವರಣದ ದೆಹಲಿಯಿಂದ ಬೆಚ್ಚಗಿನ ಗೋವಾಗೆ ತೆರಳಿದ್ದು, ಲೀಲಾ ಹೊಟೆಲ್‌ನಲ್ಲಿ ತಂಗಿದ್ದಾರೆ. ಜನವರಿ ಮೊದಲ ವಾರದಲ್ಲಿ ದೆಹಲಿಗೆ ವಾಪಸ್ಸಾಗಲಿದ್ದಾರಂತೆ.

Leave a Reply

Your email address will not be published.