ಲೋಕಸಭೆಯಲ್ಲಿ ಬಹುನಿರೀಕ್ಷಿತ ತ್ರಿವಳಿ ತಲಾಖ್‌ ಮಸೂದೆ ಮಂಡನೆ

ದೆಹಲಿ : ಬಹು ನಿರೀಕ್ಷಿತ ತ್ರಿವಳಿ ತಲಾಖ್‌ ಮಸೂದೆಗೆ ಕೊನೆಗೂ ಲೋಕಸಭೆಯಲ್ಲಿ ಮಂಡನೆಯಾಗಿದ್ದು, ಇದು ಕೇವಲ ಮುಸ್ಲಿಂ ಮಹಿಳೆಯರ ನ್ಯಾಯಕ್ಕಾಗಿಯೇ ಹೊರತು ಧರ್ಮ, ಪ್ರಾರ್ಥನೆಗೆ ಸಂಬಂಧಿಸಿದ್ದಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆ ಮಾಡುವ ತ್ರಿವಳಿ ತಲಾಖ್‌ ಮಸೂದೆಯನ್ನು ಗೃಹ ಸಚಿವ ರಾಜನಾಥ್ ಸಿಂಗ್‌ ನೇತೃತ್ವದ ತಂಡ ಸಿದ್ದಪಡಿಸಿತ್ತು. ಇದರ ಪ್ರಕಾರ ಯಾವುದೇ ರೀತಿ ನೀಡುವ ತ್ರಿವಳಿ ತಲಾಖ್‌ ಅಸಿಂಧು ಎಂದು ಹೇಳಲಾಗಿದ್ದು, ಆ ರೀತಿ ಮಾಡಿದಲ್ಲಿ ಅಂತಹ ಪತಿಗೆ 3 ವರ್ಷ ಜೈಲು ಶಿಕ್ಷೆಯನ್ನ ಕಡ್ದಾಯಗೊಳಿಸಿದೆ.

ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಅವರು ಇಂದು ಸಂಸತ್‌ನಲ್ಲಿ ತ್ರಿವಳಿ ತಲಾಖ‌ ಮಸೂದೆಯನ್ನು ಮಂಡಿಸಿ ಮಾತನಾಡಿದ ಅವರು, ಮುಸ್ಲಿಂ ಮಹಿಳೆಯರಿಗೆ ನ್ಯಾಯ ಸಿಗಬೇಕು. ಅವರ ಹಕ್ಕು ಮತ್ತು ನ್ಯಾಯಕ್ಕಾಗಿ ಈ ಕಾನೂನು ರೂಪಿಸಲಾಗಿದೆಯೇ ಹೊರತು ಮುಸ್ಲೀಮರ ಪ್ರಾರ್ಥನೆ ಹಾಗೂ ಧರ್ಮಕ್ಕೆ ಸಂಬಂಧ ಪಡುವುದಿಲ್ಲ ಎಂದಿದ್ದಾರೆ.

ಇಂದು ಲೋಕಸಭೆಯಲ್ಲಿ ಮಂಡನೆಯಾಗಿರುವ ತ್ರಿವಳಿ ತಲಾಖ್‌ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾದ ಬಳಿಕ ರಾಜ್ಯಸಭೆಯಲ್ಲೂ ಮಂಡನೆಯಾಗಬೇಕಿದ್ದು, ಬಳಿಕ ರಾಷ್ಟ್ರಪತಿಗಳ ಅಂಕಿತ ಬೀಳಬೇಕಿದೆ. ಅದಾದ ಬಳಿಕ ಮಸೂದೆ ಕಾನೂನಾಗಿ ಜಾರಿಗೆ ಬರಲಿದೆ.

Leave a Reply

Your email address will not be published.

Social Media Auto Publish Powered By : XYZScripts.com