ಅಪ್ರಾಪ್ತ ಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ ಈ ಮುದುಕ ಮತ್ತೆ ಮಾಡಿದ್ದೇನು…?

ದೆಹಲಿ : ಅಪ್ರಾಪ್ತ ಬಾಲಕಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ವಿಷಯವನ್ನು ಯಾರಿಗೂ ಹೇಳದಂತೆ ಮನವಿ ಮಾಡಿ ಅವರಿಬ್ಬರಿಗೂ ಐದು ರೂಪಾಯಿ ಕೊಟ್ಟು ಕಳುಹಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

60 ವರ್ಷ ವಯಸ್ಸಿನ ವ್ಯಕ್ತಿ ಮಹಮ್ಮದ್‌ ಜೈನುಲ್‌ ಎಂಬಾತ ಕೃತ್ಯ ಎಸಗಿದ ಆರೋಪಿಯಾಗಿದ್ದು, ಕಳೆದ ಭಾನುವಾರ ಮಕ್ಕಳಿಬ್ಬರು ಮನೆಯೆದುರು ಆಟವಾಡುತ್ತಿದ್ದಾಗ ಸಿಹಿ ತಿಂಡಿ ಕೊಡಿಸುವುದಾಗಿ ಹೇಳಿ ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಬಳಿಕ ಇಬ್ಬರಿಗೂ ಐದು ರೂಗಳನ್ನು ನೀಡಿ ಮನೆಗೆ ಕಳುಹಿಸಿದ್ದಾನೆ. ಮಕ್ಕಳಿಬ್ಬರೂ ಮನೆಗೆ ಬಂದ ಬಳಿಕ ಭಯದಿಂದಾಗಿ ಸಂಜೆಯವರೆಗೂ ಈ ವಿಚಾರವನ್ನು ಪೋಷಕರಿಂದ ಮುಚ್ಚಿಟ್ಟಿದ್ದಾರೆ. ಆದರೆ ಐದು ವರ್ಷದ ಬಾಲಕಿ ನೋವಿನಿಂದ ಅಳಲಾರಂಭಿಸಿದ್ದಾಳೆ. ಆಗ ನಡೆದ ವಿಚಾರವನ್ನು ತಾಯಿಗೆ ಹೇಳಿದ್ದಾರೆ.

ಬಳಿಕ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಜೈನುಲ್‌ ನನ್ನು ಬಂಧಿಸಿದ್ದು, ಆತನಿಗೆ ನ್ಯಾಯಾಲಯ 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.

Leave a Reply

Your email address will not be published.

Social Media Auto Publish Powered By : XYZScripts.com