Cricket : ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಿದ Team India : ಕೊಹ್ಲಿಗೆ ಅನುಷ್ಕಾ ಸಾಥ್

ಟೀಮ್ ಇಂಡಿಯಾ ಆಟಗಾರರು ಗುರುವಾರ ನಸುಕಿನ ಜಾವ ಮುಂಬೈ ವಿಮಾನ ನಿಲ್ದಾಣದಿಂದ ದಕ್ಷಿಣ ಆಪ್ರಿಕಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ಭಾರತ ಇದುವರೆಗೆ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲುವು ಸಾಧಿಸಿಲ್ಲ. ಈ ಬಾರಿ ಹೊಸ ಇತಿಹಾಸ ಸೃಷ್ಟಿಸುವ ಹುರುಪಿನೊಂದಿಗೆ ಭಾರತ ತಂಡ ಆಫ್ರಿಕಾಕ್ಕೆ ತೆರಳಿದೆ.

54 ದಿನಗಳ ಈ ಸುದೀರ್ಘ ಪ್ರವಾಸದಲ್ಲಿ ಭಾರತ ಹಾಗೂ ದಕ್ಷಿಣಾ ಆಫ್ರಿಕಾ ತಂಡಗಳ ನಡುವೆ ಒಟ್ಟು ಮೂರು ಟೆಸ್ಟ್, ಆರು ಏಕದಿನ ಹಾಗೂ 3 ಟಿ-20 ಪಂದ್ಯಗಳು ನಡೆಯಲಿವೆ. ಮೊದಲ ಟೆಸ್ಟ್ ಜನೆವರಿ 5 ರಿಂದ ಕೇಪ್ ಟೌನ್ ನಲ್ಲಿ ಪ್ರಾರಂಭವಾಗಲಿದೆ.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೊತೆಗೆ ಪತ್ನಿ ಅನುಷ್ಕಾ ಶರ್ಮಾ ಕೂಡ ಆಫ್ರಿಕಾ ನಾಡಿಗೆ ತೆರಳಿದ್ದಾರೆ. ಶಿಖರ್ ಧವನ್, ಭುವನೇಶ್ವರ್ ಕುಮಾರ್, ಅಜಿಂಕ್ಯ ರಹಾನೆ, ವೃದ್ಧಿಮಾನ ಸಹಾ, ಉಮೇಶ್ ಯಾದವ್ ಈ ಎಲ್ಲ ಆಟಗಾರರು ತಮ್ಮ ಪತ್ನಿಯರನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com