Ranaji Cricket : ಚಾಂಪಿಯನ್ ಪಟ್ಟಕ್ಕಾಗಿ ದೆಹಲಿ – ವಿದರ್ಭ ಫೈನಲ್ ಫೈಟ್

2017-18 ನೇ ಸಾಲಿನ ರಣಜಿ ಚಾಂಪಿಯನ್ ಪಟ್ಟಕ್ಕಾಗಿ ಶುಕ್ರವಾರದಿಂದ ಆರಂಭವಾಗಲಿರುವ ಫೈನಲ್ ಪಂದ್ಯದಲ್ಲಿ ದೆಹಲಿ ಹಾಗೂ ವಿದರ್ಭ ತಂಡಗಳು ಸೆಣಸಾಡಲಿವೆ. ಮಧ್ಯಪ್ರದೇಶದ ಇಂದೋರ್ ನಲ್ಲಿರುವ ಹೋಲ್ಕರ್ ಕ್ರೀಡಾಂಗಣದಲ್ಲಿ ರಣಜಿ ಟ್ರೋಫಿ ಫೈನಲ್ ಪಂದ್ಯ ನಡೆಯಲಿದೆ.

ಗೌತಮ್ ಗಂಭೀರ್ ನಾಯಕತ್ವದ ದೆಹಲಿ ತಂಡ, ಸೆಮಿಫೈನಲ್ ನಲ್ಲಿ ಬೆಂಗಾಲ್ ತಂಡವನ್ನು ಇನ್ನಿಂಗ್ಸ್ ಹಾಗೂ 26 ರನ್ ಗಳಿಂದ ಮಣಿಸಿ ಫೈನಲ್ ತಲುಪಿದೆ. ಫೈಜ್ ಫಜಲ್ ನೇತೃತ್ವದ ವಿದರ್ಭ ತಂಡ, ರೋಚಕ ಸೆಮಿಫೈನಲ್ ಹಣಾಹಣಿಯಲ್ಲಿ ಕರ್ನಾಟಕವನ್ನು 5 ರನ್ ಗಳಿಂದ ಸೋಲಿಸಿ ಫೈನಲ್ ಗೆ ಅಡಿಯಿಟ್ಟಿದೆ.

Image result for ranaji cricket gautam gambhir

ರಣಜಿ ಟ್ರೋಫಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿದರ್ಭ ತಂಡ ಫೈನಲ್ ತಲುಪಿದೆ. ದೆಹಲಿ ತಂಡ 7 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, 7 ಬಾರಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.  ಪ್ರಸಕ್ತ ರಣಜಿ ಟೂರ್ನಿಯಲ್ಲಿ 843 ರನ್ ಗಳಿಸಿರುವ ವಿದರ್ಭ ನಾಯಕ ಫೈಜ್ ಫಜಲ್ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. 632 ರನ್ ಗಳಿಸಿರುವ ದೆಹಲಿ ನಾಯಕ ಗೌತಮ್ ಗಂಭೀರ್ 8ನೇ ಸ್ಥಾನದಲ್ಲಿದ್ದಾರೆ.

Image result for faiz fazal

ವಿದರ್ಭ ಈ ಸಲದ ಚಾಂಪಿಯನ್ ಆಗಲಿದೆಯಾ ಅಥವಾ ದೆಹಲಿ 8ನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯಲಿದೆಯಾ ಎಂಬುದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಸೃಷ್ಟಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com