Kabul : ಬಾಂಬ್ ಸ್ಫೋಟದಲ್ಲಿ 40 ಜನರ ದುರ್ಮರಣ, ಹಲವರಿಗೆ ಗಾಯ

ಅಫಘಾನಿಸ್ತಾನದ ರಾಜಧಾನಿ ಕಾಬೂಲಿನಲ್ಲಿ ಗುರುವಾರ ಭಾರೀ ಬಾಂಬ್ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಟ 40 ಜನರು ಸಾವಿಗೀಡಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾಬೂಲ್ ನಗರದ ಶಿಯಾ ಸಾಂಸ್ಕೃತಿಕ ಕೇಂದ್ರದ ಬಳಿ ಈ ಬಾಂಬ್ ಸ್ಫೋಟಗೊಂಡಿದೆ.

Image result for shiite blast kabul cultural

‘ ತಬಯನ್ ಸಾಂಸ್ಕೃತಿಕ ಕೇಂದ್ರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಸೋವಿಯತ್ ಒಕ್ಕೂಟ ಅಫಘಾನಿಸ್ತಾನದ ಮೇಲೆ ದಾಳಿ ನಡೆಸಿದ 38 ನೇ ವರ್ಷಾಚರಣೆಯ ಪ್ರಯುಕ್ತ ಸಮಾರಂಭ ನಡೆಯುತ್ತಿದ್ದ ವೇಳೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ ‘ ಆಂತರಿಕ ಸಚಿವಾಲಯದ ವಕ್ತಾರ ನಸ್ರತ್ ರಹೀಮಿ ಹೇಳಿದ್ದಾರೆ. ದಾಳಿಯ ಹೊಣೆಯನ್ನು ಇದುವರೆಗೆ ಯಾವ ಉಗ್ರ ಸಂಘಟನೆಗಳೂ ಹೊತ್ತುಕೊಂಡಿಲ್ಲ.

 

Leave a Reply

Your email address will not be published.

Social Media Auto Publish Powered By : XYZScripts.com