ಹೊಸ ವರ್ಷದಂದು ಹುಟ್ಟೋ ಮೊದಲ ಹೆಣ್ಣು ಮಗುವಿಗೆ BBMP ಯಿಂದ ಬಂಪರ್ GIFT

ಬೆಂಗಳೂರು : ಹೊಸ ವರ್ಷದಂದು ಹುಟ್ಟುವ ಹೆಣ್ಣುಮಗುವಿಗೆ ಬಿಬಿಎಂಪಿ ಬಂಪರ್ ಆಫರ್‌ ಘೋಷಿಸಿದ್ದು, ಪಾಲಿಕೆಯ ಆಸ್ಪತ್ರೆಯಲ್ಲಿ ಹೊಸ ವರ್ಷದಂದು ಹುಟ್ಟುವ ಮೊದಲ ಹೆಣ್ಣು ಮಗುವಿಗೆ 5 ಲಕ್ಷರೂ ಮೊತ್ತದ ನಗದು ಉಡುಗೊರೆ ನೀಡುವುದಾಗಿ ಘೋಷಿಸಿದೆ.

ಹೆಣ್ಣು ಭ್ರೂಣ ಹತ್ಯೆ, ಹೆಣ್ಣು ಮಕ್ಕಳ ಶಿಕ್ಷಣ ಈ ರೀತಿಯ ಕೆಲಸಗಳಿಗೆ ಒತ್ತು ನೀಡುವ  ದೃಷ್ಠಿಯಿಂದ ಬಿಬಿಎಂಪಿ ಈ ನಿರ್ಧಾರ ಕೈಗೊಂಡಿದೆ. ಹೊಸ ವರ್ಷ ಮಧ್ಯರಾತ್ರಿ ಅಂದರೆ 12 ಗಂಟೆಗೆ ಹುಟ್ಟುವ ಮೊದಲ ಹೆಣ್ಣು ಮಗುವಿಗೆ ಈ 5 ಲಕ್ಷದ ಬಹುಮಾನ ಸಿಗಲಿದೆ.

ಮಗುವಿನ ಹೆಸರಿನಲ್ಲಿ ಹಾಗೂ ಬಿಬಿಎಂಪಿ ಆಯುಕ್ತರ ಹೆಸರಿನಲ್ಲಿ ಜಾಯಿಂಟ್‌ ಅಕೌಂಟ್ ಮಾಡಿಸಿ ಆಖಾತೆಗೆ ಹಣವನ್ನು ಜಮೆ ಮಾಡಲಾಗುತ್ತದೆ. ಮಗುವಿಗೆ 18 ವರ್ಷ ತುಂಬಿದ ಬಳಿ ಆ ಹಣವನ್ನು ಮಗುವಿನ ಉನ್ನತ ಶಿಕ್ಷಣಕ್ಕೆ ಬಳಕೆ ಮಾಡಿಕೊಳ್ಳಬಹುದು ಎಂದು ಮೇಯರ್‌ ಸಂಪತ್‌ ರಾಜ್‌ ತಿಳಿಸಿದ್ದಾರೆ.

ಅಲ್ಲದೆ ನಾರ್ಮಲ್‌ ಡೆಲಿವರಿ ಆದ ಮಗುವಿಗೆ ಮಾತ್ರ ಈ ಅವಕಾಶ ಸಿಗಲಿದೆ ಎಂಬ ಷರತ್ತನ್ನೂ ವಿಧಿಸಲಾಗಿದೆ. ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಅಂತಹ ಮಕ್ಕಳು ಗಂಡು ಮಕ್ಕಳಿಗೆ ಸಮನಾಗಿ ನಿಂತು ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಅಂತಹ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ನೀಡುವ ದೃಷ್ಠಿಯಿಂದ ಈ ರೀತಿಯ ಯೋಜನೆ ಜಾರಿಗೆ ತಂದಿರುವುದಾಗಿ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com