Ashes Cricket : ಕುಕ್ ಅಮೋಘ ದ್ವಿಶತಕ : ಬೃಹತ್ ಮೊತ್ತ ಸೇರಿಸಿದ ಇಂಗ್ಲೆಂಡ್

ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ 3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮುನ್ನಡೆ ಸಾಧಿಸಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ 9 ವಿಕೆಟ್ ಕಳೆದುಕೊಂಡು 491 ರನ್ ಗಳಿಸಿದೆ.

ಈ ಮೂಲಕ ಇಂಗ್ಲೆಂಡ್ 164 ರನ್ ಗಳ ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾ ಪರವಾಗಿ ಜೋಶ್ ಹೇಜಲ್ವುಡ್, ನೇಥನ್ ಲಾಯನ್ ಹಾಗೂ ಪ್ಯಾಟ್ರಿಕ್ ಕಮ್ಮಿನ್ಸ್ ತಲಾ 3 ವಿಕೆಟ್ ಪಡೆದರು.

ಎರಡನೇ ದಿನದಂತ್ಯಕ್ಕೆ 104 ರನ್ ಗಳಿಸಿ ಅಜೇಯರಾಗುಳಿದಿದ್ದ ಎಡಗೈ ಬ್ಯಾಟ್ಸಮನ್ ಅಲಿಸ್ಟರ್ ಕುಕ್ 3ನೇ ದಿನದಾಟದಲ್ಲಿ ಭರ್ಜರಿ ದ್ವಿಶತಕ ಬಾರಿಸಿದ್ದಾರೆ. 409 ಎಸೆತಗಳನ್ನೆದುರಿಸಿದ ಕುಕ್ 244 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ನಾಯಕ ಜೋ ರೂಟ್ (61), ಸ್ಟುವರ್ಟ್ ಬ್ರಾಡ್ (56) ಅರ್ಧಶತಕ ಬಾರಿಸಿದರು. ಅಲಿಸ್ಟರ್ ಕುಕ್ ಹಾಗೂ ಜೇಮ್ಸ್ ಆ್ಯಂಡರ್ಸನ್ ನಾಟೌಟ್ ಆಗಿ ಉಳಿದಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com