ಜ್ಯೂಸ್‌ನಲ್ಲಿ ಮತ್ತು ಬರಿಸೋ ಔಷಧಿ ಹಾಕಿ ನಟನಿಂದ ಯುವತಿ ಮೇಲೆ ಅತ್ಯಾಚಾರ..!

ಬೆಂಗಳೂರು : ಕೋಲ್ಡ್‌ ಡ್ರಿಂಕ್ಸ್‌ನಲ್ಲಿ ಮತ್ತು ಬರಿಸುವ ಔಷಧಿ ಬೆರಸಿ ಹೊಂಬಣ್ಣ ಚಿತ್ರದ ನಟ ಸುಬ್ರಮಣ್ಯ ನನ್ನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಯುವತಿಯೊಬ್ಬಳು ಬಸವೇಶ್ವರನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾಳೆ.

ದೂರು ದಾಖಲಾಗುತ್ತಿದ್ದಂತೆ ಸುಬ್ರಮಣ್ಯ ಬೆಂಗಳೂರಿನಿಂದ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಈತ ತೀರ್ಥಹಳ್ಳಿ ಮೂಲದವನು ಎಂದು ವರದಿಯಾಗಿದೆ.

ನಡೆದಿದ್ದೇನು ?

ಕಳೆದ ಎರಡು ವರ್ಷಗಳಿಂದ ಸುಬ್ರಮಣ್ಯನಿಗೂ ನಮ್ಮ ಕುಟುಂಬಸ್ಥರಿಗೂ ಪರಿಚಯವಿದೆ. ಕುಟುಂಬಸ್ತರ ಜೊತೆ ಮಾತನಾಡಿ ಮದುವೆಯಾಗುವುದಾಗಿ ಹೇಳಿದ್ದ. ಮದುವೆಯಾಗೋಣ ಎಂದಿದ್ದಕ್ಕೆ ಸಿನಿಮಾ ಜುಲೈನಲ್ಲಿ ಬಿಡುಗಡೆಯಾಗುತ್ತದೆ. ಬಳಿಕ ಮದುವೆಯಾಗೋಣ ಎಂದಿದ್ದ.

ಬಳಿಕ ನನ್ನ ಅಕ್ಕನ ಮನೆಯಲ್ಲಿ ಪಾರ್ಟಿ ಇದೆ ಬಾ ಎಂದು ಸುಳ್ಳು ಹೇಳಿ, ತನ್ನ ರೂಮಿಗೆ ಕರೆದುಕೊಂಡು ಹೋಗಿ ಬಳಿಕ ಜ್ಯೂಸ್‌ ನೀಡಿದ್ದ. ಸ್ವಲ್ಪ ಸಮಯದ ಬಳಿಕ ನನಗೆ ಪ್ರಜ್ಞೆ ತಪ್ಪಿತು. ನನಗೆ ಎಚ್ಚರವಾದಾಗ ನನ್ನ ಮೈ ಮೇಲೆ ಬಟ್ಟೆ ಇರಲಿಲ್ಲ. ಆಗ ಸುಬ್ರಮಣ್ಯ ನನ್ನನ್ನು ದೈಹಿಕವಾಗಿ ಬಳಸಿಕೊಂಡರುವುದು ತಿಳಿಯಿತು. ನನ್ನ ಮೇಲೆ ಆತ ಅತ್ಯಾಚಾರವೆಸಗಿದ್ದಾನೆ. ಇದನ್ನ ಪ್ರಶ್ನೆ ಮಾಡಿದ್ದಕ್ಕೆ ನಾನು ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಸಮಾಧಾನ ಮಾಡಿದ್ದ. ಕೆಲ ದಿನಗಳ ಬಳಿಕ ನನ್ನನ್ನು ನಿರ್ಲಕ್ಷ್ಯ ಮಾಡತೊಡಗಿದ್ದ.

ಮತ್ತೆ ನಾನೇ ನನ್ನನ್ನು ಮದುವೆಯಾಗು ಎಂದಿದ್ದಕ್ಕೆ ನನಗೆ ಸಿನಿಮಾ ತೆಗೆಯುವಂತಹ ಹುಡುಗಿ ಬೇಕು. ನಾವು ಬಡವರು  ಎಂದು ಹೇಳಿದ್ದಾನೆ. ಅಲ್ಲದೆ ಸಿನಿಮಾ ಇಂಡಸ್ಟ್ರಿಯವರ ಜೊತೆ ಸ್ವ ಅಡ್ಜೆಸ್ಟ್‌ ಮಾಡಿಕೊ ಎಂದೂ ಹೇಳಿದ್ದ. ಆದರೆ ನಾನು ಇದನ್ನು ನಿರಾಕರಿಸಿದ್ದಕ್ಕೆ ನನ್ನ ವಿರುದ್ದ ಆರೋಪ ಮಾಡಿ ಬೆದರಿಕೆ ಹಾಕುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published.