ಗೋವುಗಳ ಎಣಿಕೆಗೆ 7.86 ಕೋಟಿ ಮೀಸಲಿಟ್ಟ ಯೋಗಿ ಆದಿತ್ಯನಾಥ್‌ ಸರ್ಕಾರ…

ಲಖನೌ : ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಸರ್ಕಾರ ಗೋವುಗಳ ಎಣಿಕೆಗಾಗಿ ಸರ್ವೆ ಮಾಡಲು ಮುಂದಾಗಿದ್ದು, ಮಂಗಳವಾರ ಈ ಕುರಿತು ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಗೋವುಗಳ ಸರ್ವೆ ಮಾಡಲು ಒಟ್ಟು 7.86 ಕೋಟಿ ರೂ ಹಣವನ್ನು ಮೀಸಲಿಟ್ಟಿದ್ದು, ಗೋವುಗಳ ಸಮೀಕ್ಷೆ ಜೊತೆಗೆ ಎಮ್ಮೆ, ಹಂದಿ, ಮೇಕೆ, ಕುರಿಗಳ ಎಣಿಕೆ ಕಾರ್ಯ ಸಹ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

2012ರಲ್ಲಿ ನಡೆದ ಸಮೀಕ್ಷೆಯ ಪ್ರಕಾರ ರಾಜ್ಯದ ಜನಸಂಖ್ಯೆ 2.5 ಕೋಟಿಯಿದ್ದರೆ 3.6 ಕೋಟಿ ಎಮ್ಮೆಗಳು, 1.55 ಕೋಟಿ ಕುರಿಗಳು, 13.34  ಲಕ್ಷ ಹಂದಿಗಳು ಇದ್ದವು ಎಂದು ತಿಳಿದು ಬಂದಿತ್ತು. ಅದರಂತೆ ಈ ಬಾರಿ ನಡೆಯಲಿರುವ ಸಮೀಕ್ಷೆಯಿಂದ ರಾಜಯದಲ್ಲಿ ಎಷ್ಟು ಹಸುಗಳಿವೆ. ಎಷ್ಟು ಕರುಗಳಿವೆ ಎಂಬುದು ತಿಳಿಯುತ್ತದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

 

Leave a Reply

Your email address will not be published.

Social Media Auto Publish Powered By : XYZScripts.com