ಕುಲಭೂಷಣ್ ಜಾದವ್‌ ಪತ್ನಿಯ ಶೂ ಬಗ್ಗೆ ಪಾಕ್ ಅಧಿಕಾರಿಗಳು ಹೇಳಿದ್ದೇನು…….?

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಬಂಧಿತರಾಗಿರುವ ಕುಲಭೂಷಣ್ ಜಾದವ್ ಅವರ ಭೇಟಿ ವೇಳೆ ಜಾದವ್‌ ಪತ್ನಿ ಧರಿಸಿದ್ದ ಶೂ ಸಂಶಯಾಸ್ಪದವಾಗಿತ್ತು ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜಾದವ್‌ ಪತ್ನಿ ಧರಿಸಿದ್ದ ಶೂಗಳು ಅಳತೆಗಿಂತ ದೊಡ್ಡದಾಗಿದ್ದವು. ಆದ್ದರಿಂದ ಶಂಕೆಯ ಹಿನ್ನೆಲೆಯಲ್ಲಿ ಶೂಗಳನ್ನು ಪಡೆದು ಪರಿಶೀಲನೆ ನಡೆಸಲಾಗಿತ್ತು. ಅಲ್ಲದೆ ಅದರ ಬದಲಿಗೆ ಬೇರೆ ಚಪ್ಪಲಿಗಳನ್ನು ಅವರಿಗೆ ನೀಡಲಾಗಿತ್ತು. ಅವರಿಂದ ಪಡೆದಿದ್ದ ಒಡವೆಗಳನ್ನೂ ಅವರಿಗೆ ವಾಪಸ್‌ ನೀಡಿದ್ದೇವೆ. ಆದ್ದರಿಂದ ಭಾರತದ ಯಾವುದೇ ಆರೋಪದಲ್ಲಿ ಹುರುಳಿಲ್ಲ. ಪಾರದರ್ಶಕತೆ ಇರಬೇಕೆಂಬ ದೃಷ್ಠಿಯಿಂದ ಈ ರೀತಿ ಮಾಡಿದ್ದೆವು ಎಂದು ಪಾಕ್ ಅಧಿಕಾರಿಗಳು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಸೋಮವಾರ ಪಾಕಿಸ್ತಾನದಲ್ಲಿ ಬೇಹುಗಾರಿಕೆ ಆರೋಪದಡಿ ಬಂಧಿತರಾಗಿರುವ ಕುಲಭೂಷಣ್ ಜಾದವ್‌ ಅವರನ್ನು ಅವರ ತಾಯಿ ಹಾಗೂ ಪತ್ನಿ ಭೇಟಿ ಮಾಡದ್ದರು. ಈ ವೇಳೆ ಜಾದವ್‌ ಪತ್ನಿಯ ಒಡವೆ, ಮಂಗಳಸೂತ್ರ, ಬಿಂದಿಯನ್ನು ಪಾಕ್‌ ಅಧಿಕಾರಿಗಳು ತೆಗೆಸಿದ್ದರು ಎಂದು ಹೇಳಲಾಗಿತ್ತು. ಈ ಕುರಿತಂತೆ ಪಾಕ್‌ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com