ಪಾಕಿಸ್ತಾನವನ್ನು ನಾಲ್ಕು ಭಾಗ ಮಾಡಿದಾಗಲೇ ಎಲ್ಲಾ ಸಮಸ್ಯೆಗೂ ಪರಿಹಾರ : ಸುಬ್ರಮಣಿಯನ್‌ ಸ್ವಾಮಿ

ದೆಹಲಿ : ಪಾಕಿಸ್ತಾನದಲ್ಲಿ ಬಂಧಿಯಾಗಿರುವ ಕುಲಭೂಷಣ್ ಜಾದವ್‌ ಅವರನ್ನು ಭೇಟಿಯಾಗಲು ತೆರಳಿದ್ದ ಜಾದವ್‌ ಕುಟುಂಬಸ್ಥರನ್ನು ಪಾಕಿಸ್ತಾನ ಕೆಟ್ಟದಾಗಿ ನಡೆಸಿಕೊಂಡಿದ್ದರ ಕುರಿತು ಬಿಜೆಪಿ ನಾಯಕ  ಸುಬ್ರಮಣಿಯನ್ ಸ್ವಾಮಿ ಕಿಡಿ ಕಾರಿದ್ದಾರೆ.

ಪಾಕಿಸ್ತಾನ ಕೀಳು ಮಟ್ಟದ ಪ್ರವೃತ್ತಿಯನ್ನು ತೋರಿದೆ. ಇಂತಹ ಪಾಕಿಸ್ತಾನವನ್ನು ನಾಲ್ಕು ಭಾಗವಾಗಿ ವಿಂಗಡಿಸಿದಾಗಲೆ ಇದೆಲ್ಲಕ್ಕೂ ಪರಿಹಾರ ಸಿಗುತ್ತದೆ. ಪಾಕಿಸ್ತಾನದ ಈ ನಡೆಯನ್ನು ಖಂಡಿಸುತ್ತೇನೆ. ಮಂಗಳ ಸೂತ್ರ, ಕುಂಕುಮವನ್ನು ತೆಗೆಯುವಂತೆ ಹೇಳಿ ತನ್ನ ಕ್ರೌರ್ಯವನ್ನು ಮತ್ತೊಮ್ಮೆ ತೋರಿಸಿದೆ. ಈ ರೀತಿ ಮಾಡಿದ್ದು ಮಹಾಭಾರತದಲ್ಲಿ ದ್ರೌಪದಿಯ ಪಾತ್ರ ಕಣ್ಮುಂದೆ ಬಂದಂತಾಗಿದೆ. ಆ ಹೆಣ್ಣಮಗಳನ್ನು ಆ ರೀತಿ ನಡೆಸಿಕೊಂಡಿದ್ದು ಖಂಡನೀಯ ಎಂದಿದ್ದಾರೆ.

 

Leave a Reply

Your email address will not be published.