ಸಂವಿಧಾನ ಬದಲಿಸುವುದೆಂದರೆ ಜನಿವಾರ ಬದಲಿಸಿದಂತಲ್ಲ : ಹೆಗಡೆ ವಿರುದ್ದ ಸ್ವಾಮೀಜಿ ಕಿಡಿ

ಮೈಸೂರು : ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಿಸಲು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್‌ ಹೆಗಡೆ ವಿರುದ್ದ ಉರಿಲಿಂಗಿ ಪೆದ್ದಿ ಮಠದ ಜ್ಜಾನ ಪ್ರಕಾಶ ಸ್ವಾಮೀಜಿ ಕಿಡಿಕಾರಿದ್ದಾರೆ.

ಸಂವಿಧಾನ ಬದಲಿಸುವುದೆಂದರೆ ಜನಿವಾರ ಬದಲಿಸಿದಷ್ಟು ಸುಲಭವಲ್ಲ. ನಿಮಗೆ ನಿಜವಾಗಿಯೂ ತಾಕತ್ತಿದ್ದರೆ ಸಂಸತ್ತಿನಲ್ಲಿ ಮಂಡಿಸಿ ಎಂದಿದ್ದಾರೆ. ಜಾತ್ಯಾತೀತತೆ ಬಗ್ಗೆ ಮಾತನಾಡುವ ಅನಂತ್ ಕುಮಾರ್‌ ಬಹುತ್ವವಾದಕ್ಕೆ ವಿರೋಧಿ. ನಮ್ಮ ರಕ್ತವಲ್ಲ, ನಿಮ್ಮ  ರಕ್ತದ ಬಗ್ಗೆ ನಮಗೆ ಸಂಶಯ ಮೂಡುತ್ತಿದೆ. ನಿಮ್ಮ ಹೊಲಸು ನಾಲಿಗೆ ನೀವೇನೆಂದು ತೋರಿಸುತ್ತಿದೆ ಎಂದಿದ್ದಾರೆ. ಜೊತೆಗೆ ಪದೇ ಪದೇ ಇಂತಹ ಹೇಳಿಕೆ ನೀಡಿ ಕೋಮುದ್ವೇಷ ಹೆಚ್ಚುವಂತೆ ಮಾಡುತ್ತಿರುವ ಇಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

 

 

Leave a Reply

Your email address will not be published.