Mirza Ghalib 220ನೇ ಜನ್ಮದಿನ : ಉರ್ದು ಕವಿಗೆ ಡೂಡಲ್ ಗೌರವ ಸಲ್ಲಿಸಿದ Google

ಖ್ಯಾತ ಉರ್ದು ಕವಿ ಮಿರ್ಜಾ ಗಾಲಿಬ್ ನ 220ನೇ ಜನ್ಮದಿನದಂದು ಡೂಡಲ್ ಮೂಲಕ ಗೂಗಲ್ ಗೌರವ ಸಲ್ಲಿಸಿದೆ. ಶಾಯರಿ ಹಾಗೂ ಗಜಲ್ ರಚನೆಗಳಿಂದ ಖ್ಯಾತಿ ಪಡೆದಿದ್ದ ಮಿರ್ಜಾ ಗಾಲಿಬ್ 1997 ಡಿಸೆಂಬರ್ 27 ರಂದು ಆಗ್ರಾದಲ್ಲಿ ಜನಿಸಿದ್ದರು.

Image result for mirza ghalib google

ಗಾಲಿಬ್ ಎಂದೇ ಪ್ರಸಿದ್ಧವಾದ ಈತನ ಮೂಲ ಹೆಸರು ಮಿರ್ಜಾ ಅಸಾದುಲ್ಲಾ ಬೇಗ್ ಖಾನ್ ಎಂದಾಗಿತ್ತು. ಮಾತೃಭಾಷೆ ಉರ್ದು ಆಗಿತ್ತಾದರೂ ಮನೆಯಲ್ಲಿ ಪರ್ಶಿಯನ್ ಹಾಗೂ ಟರ್ಕಿ ಭಾಷೆಗಳಲ್ಲಿಯೂ ಮಾತಾಡುತ್ತಿದ್ದರು.

Image result for mirza ghalib shayari in hindi

Image result for mirza ghalib shayari

 

ಇರಾನಿನಿಂದ ಭಾರತಕ್ಕೆ ಬಂದಿದ್ದ ಅಬ್ದುಸ್ ಸಮದ್ ಎಂಬ ಪ್ರವಾಸಿ, ಮಿರ್ಜಾಗೆ ಪರ್ಶಿಯನ್, ಅರೇಬಿಕ್, ತರ್ಕಶಾಸ್ತ್ರ, ತತ್ವಶಾಸ್ತ್ರಗಳನ್ನು ಹೇಳಿಕೊಟ್ಟರು. ಪರ್ಶಿಯನ್ ಹಾಗೂ ಅರೇಬಿಕ್ ಭಾಷೆಗಳ ಶಿಕ್ಷಣವನ್ನು ಪಡೆದ ಮಿರ್ಜಾ ತನ್ನ 11 ನೇ ವಯಸ್ಸಿನಿಂದಲೇ ಕವನಗಳನ್ನು ರಚಿಸಲು ಪ್ರಾರಂಭಿಸಿದ್ದ.

Image result for mirza ghalib shayari

Related image

13ನೇ ವಯಸ್ಸಿನಲ್ಲಿ ಮಿರ್ಜಾ, ಉಮ್ರಾ ಬೇಗಮ್ ಳನ್ನು ಮದುವೆಯಾದ. ಮಿರ್ಜಾ ಗಾಲಿಬ್ ಗೆ ಜನಿಸಿದ 7 ಮಕ್ಕಳು ಬಾಲ್ಯಾವಸ್ಥೆಯಲ್ಲಿಯೇ ತೀರಿಕೊಂಡವು. ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದ ಗಾಲಿಬ್ ಕವನಗಳಲ್ಲಿ, ದುಃಖದ ಛಾಯೆಯನ್ನು ಕಾಣಬಹದು.

ಮೊಘಲ್ ದೊರೆ 2ನೇ ಬಹಾದೂರ್ ಷಾ ಜಫರ್, ಮಿರ್ಜಾ ಗಾಲಿಬ್ ಗೆ ದಬೀರ್ ಉಲ್ ಮುಲ್ಕಂದ್, ನಜ್ಮ್ ಉದ್ ದೌಲಾ ಎಂಬ ಬಿರುದುಗಳನ್ನು ನೀಡಿ ಗೌರವಿಸಿದ್ದ.

 

Leave a Reply

Your email address will not be published.

Social Media Auto Publish Powered By : XYZScripts.com