ವಿಧವೆ ಮೇಲೆ ಪ್ರಿಯಕರನಂದಲೇ ಅತ್ಯಾಚಾರ : ಕಿರುಚಾಟ ಕೇಳಿ ಬಂದವರೂ ಮಾಡಿದ್ದು ಅದನ್ನೇ !

ರಾಯಪುರ : 24 ವರ್ಷ ವಯಸ್ಸಿನ ವಿಧವೆಯ ಮೇಲೆ ಪ್ರಿಯಕರನೇ ಅತ್ಯಾಚಾರವೆಸಗಿದ ಘಟನೆ ಛತ್ತೀಸ್‌ಗಡದ ರಾಯಪುರ ಜಿಲ್ಲೆಯಲ್ಲಿ ನಡೆದಿದೆ.

ವಿಧವೆ ಮೇಲೆ ಅತ್ಯಾಚಾರ ನಡೆಸುವ ವೇಳೆ ಆಕೆಯ ಕಿರುಚಾಟ ಕೇಳಿ ಬದು ಮೂವರು ಸಹ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿಗಳನ್ನು ಸುರೇಶ್ ಸಾಹು, ಹರೀಶ್‌ ಚಂದ್ರಕರ್‌, ತ್ರಿನಾಥ ಮಹಾನಂದ್‌, ವಿನಯ್ ಯಾದವ್‌ ಎಂದು ತಿಳಿದುಬಂದಿದ್ದು, ನಾಲ್ವರನ್ನು ಪೊಲೀಸರು ಬಂಧಸಿದ್ದಾರೆ.

ಸಂತ್ರಸ್ತ ಮಹಿಳೆಯ ಹೊಟೆಲ್‌ ಒಂದರಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಈಕೆಗೆ ಆರೋಪಿ ಸುರೇಶ್‌ ಸಾಹು ಜೊತೆ ಸಂಬಂಧವಿತ್ತು. ಆತ ಸಂತ್ರಸ್ತೆಯನ್ನು ಕಾಪಾ ಎಂಬ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಇದೇ ಸಂದರ್ಭದಲ್ಲಿ ಯುವತಿಯ ಕಿರುಚಾಟ ಕೇಳಿ ಬಂದ ಮೂವರು ವ್ಯಕ್ತಿಗಳು ಸಾಹುವನ್ನು ಬೆದರಿಸಿದ್ದು, ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಮೂವರು ಸೇರಿ ಆಕೆಯ ಮೇಲೆ ಮತ್ತೆ ಅತ್ಯಾಚಾರವೆಸಗಿದ್ದು, ವಿಷಯ ಬಹಿರಂಗಪಡಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.

ಬಳಿಕ ಸಂತ್ರಸ್ತೆ ಸಮೀಪದ ಪಂಡ್ರಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಆ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com