ಕ್ಯಾಂಡಲ್‌ನಿಂದಾಗಿ ಹೊತ್ತಿ ಉರಿದ ಮನೆ : ಮೂರು ಮಂದಿ ಸಜೀವ ದಹನ

ಬೆಂಗಳೂರು : ಕ್ಯಾಂಡಲ್‌ನಿಂದ ಹೊತ್ತಿದ ಬೆಂಕಿ ಇಡೀ ಮನೆಯನ್ನು ವ್ಯಾಪಿಸಿದ ಪರಿಣಾಮ ಒಂದೇ ಕುಟುಂಬದ ಮೂವರು ಸಾವಿಗೀಡಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಹದೇವಪುರದ ಉದಯನಗರದಲ್ಲಿ ಘಟನೆ ನಡೆದಿದ್ದು, ಮೃತರನ್ನು ಮುರುಗನ್‌ (35), ಪತ್ನಿ ಸೋಫಿಯಾ ( 30) ಮಗಳು ಫ್ಲೋರಾ (6) ಎಂದು ಗುರುತಿಸಲಾಗಿದೆ.
ಇಂದು ಬೆಳಗ್ಗೆ ಮನೆಯಿಂದ ಹೊಗೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಅಗ್ನಿಶಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ವಿಚಾರ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದು, ಬೆಂಕಿ ನಂದಿಸುವ ಹೊತ್ತಿಗೆ ಮೂವರೂ ಮೃತಪಟ್ಟಿದ್ದಾಗಿ ತಿಳಿದುಬಂದಿದೆ.
ಸದ್ಯ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಅಗ್ನಿ ಅವಗಡಕ್ಕೆ ನಿಜವಾದ ಕಾರಣ ಹುಡುಕಲಾಗುತ್ತಿದೆ.

One thought on “ಕ್ಯಾಂಡಲ್‌ನಿಂದಾಗಿ ಹೊತ್ತಿ ಉರಿದ ಮನೆ : ಮೂರು ಮಂದಿ ಸಜೀವ ದಹನ

  • December 27, 2017 at 2:42 PM
    Permalink

    If you would like to improve your knowledge only keep visiting this site and be updated with the newest information posted here.

    Reply

Leave a Reply

Your email address will not be published.

Social Media Auto Publish Powered By : XYZScripts.com