ನಾನು ಅವಳಲ್ಲ ಅವನು ಎಂದು ನಂಬಿಸಿ ಈ ಹುಡುಗಿ ಮಾಡಿದ್ಲು ‘ಹುಡುಗಾ’ಟ…?

ಅಮರಾವತಿ : ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಯುವಕನ ಸೋಗಿನಲ್ಲಿ ಮೂವರನ್ನು ಮದುವೆಯಾಗಿದ್ದು, ಮೂರನೇ ಪತ್ನಿ ಈಗ ಅಪ್ರಾಪ್ತೆಯ ವಿರುದ್ದ ದೂರು ನೀಡಿದ್ದಾಳೆ. ತನಿಖೆ ವೇಳೆ ಪೊಲೀಸರಿಗೆ ಈ ವಿಚಾರ ತಿಳಿದುಬಂದಿದೆ.

ತಮಿಳುನಾಡಿನ ಮಿಲ್‌ವೊಂದರಲ್ಲಿ ರಮಾದೇವಿ ಎಂಬ ಹೆಸರಿನ ಅಪ್ರಾಪ್ತೆ ಕೆಲಸ ಮಾಡುತ್ತಿದ್ದಳು. ಬಳಿಕ ಪುಲಿವೆಂಡುಲದಲ್ಲಿರುವ ಮಿಲ್‌ನಲ್ಲಿ ಬಂದು ಕೆಲಸಕ್ಕೆ ಸೇರಿದ್ದಳು. ಅಲ್ಲಿ ರಂಭಾ ಎಂಬಾಕೆಯ ಜೊತೆ ಸ್ನೇಹ ಬೆಳೆಸಿದ ರಮಾದೇವಿ ತಾನೊಬ್ಬ ಹುಡುಗ ಎಂದು ಪರಿಚಯಿಸಿಕೊಂಡಿದ್ದಳು.

ಸದಾ ಹುಡುಗನ ವೇಷದಲ್ಲಿರುತ್ತಿದ್ದ ರಮಾದೇವಿ ಹಾಗೂ ರಂಭಾ ಪ್ರೀತಿಸತೊಡಗಿದ್ದರು. ಬಳಿಕ ಇಬ್ಬರೂ ಮದುವೆಯಾಗಿದ್ದಾರೆ. ಆಕೆ ಹುಡಗನಲ್ಲ ಹುಡುಗಿ ಎಂಬುದು ಮದುವೆಯಾದ ಎರಡು ತಿಂಗಳ ಬಳಿಕ ರಂಭಾಗೆ ತಿಳಿದುಬಂದಿದೆ. ಬಳಿಕ ರಂಭಾ ಈ ವಿಚಾರವನ್ನು ತನ್ನ ಪೋಷಕರಿಗೆ ತಿಳಿಸಿದ್ದಾಳೆ. ಪೋಷಕರು ರಮಾದೇವಿ ವಿರುದ್ದ ದೂರು ನೀಡಿದ್ದು, ಈ ಹಿಂದೆ ಅವಳು ಇಬ್ಬರನ್ನು ಮದುವೆಯಾಗಿದ್ದ ವಿಚಾರ ತನಿಖೆಯಿಂದ ತಿಳಿದುಬಂದಿದೆ.

Leave a Reply

Your email address will not be published.