4 ಅಡಿ ಎತ್ತರದ ಜೈಶ್ ಉಗ್ರನ ಹತ್ಯೆ : ಸೇನೆಗೆ ತಲೆನೋವಾಗಿದ್ದ ಛೋಟಾ ನೂರಾ..!

ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ರಕ್ಷಣಾ ಪಡೆಗಳು ನಡೆಸಿದ ಎನ್ಕೌಂಟರ್ ನಲ್ಲಿ ಜೈಶ್-ಎ-ಮಹಮ್ಮದ್ ಸಂಘಟನೆಯ ಪ್ರಮುಖ ಉಗ್ರ ಬಲಿಯಾಗಿದ್ದಾನೆ. ಮಂಗಳವಾರ ಮುಂಜಾನೆ ನಡೆಸಲಾದ ಈ ಎನ್ಕೌಂಟರ್ ನಲ್ಲಿ ನೂರ್ ಮಹಮ್ಮದ್ ಸೇನಾ ಪಡೆಗಳ ಗುಂಡಿಗೆ ಹತನಾಗಿದ್ದಾನೆ.

4 ಅಡಿ ಎತ್ತರದ ನೂರ್ ಮಹಮ್ಮದ್ ತಂತ್ರಾಯ್ ಅಲಿಯಾಸ್ ಛೋಟಾ ನೂರಾ ಸೇನೆಗೆ ಹಲವು ತಿಂಗಳುಗಳಿಂದ ತಲೆನೋವಾಗಿ ಪರಿಣಮಿಸಿದ್ದ.  ಅಕ್ಟೋಬರ್ ತಿಂಗಳಿನಲ್ಲಿ ಶ್ರೀನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಬಿಎಸ್ ಎಫ್ ಕ್ಯಾಂಪ್ ಮೇಲೆ ನಡೆದ ಉಗ್ರ ದಾಳಿ ಹಾಗೂ ಉರಿ ಸೆಕ್ಟರ್ ನಲ್ಲಿ ನಡೆದ ದಾಳಿಯ ಪ್ರಮುಖ ರೂವಾರಿಯಾಗಿದ್ದ.

Leave a Reply

Your email address will not be published.